ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಳ್ಳ ಹಿಡಿಯಿತೇ ಬಹುಕೋಟಿ ವಂಚನೆ ಪ್ರಕರಣ..? - ಹೆಸ್ಕಾಂ ನಿರ್ಲಕ್ಷ್ಯದಿಂದ ಬೊಕ್ಕಸಕ್ಕೆ ಬಾರದ 51 ಕೋಟಿ

ಹುಬ್ಬಳ್ಳಿ: ಅದು ಸರ್ಕಾರಿ ಇಲಾಖೆಯಲ್ಲಿ ನಡೆದಿದ್ದ ಬಹುಕೋಟಿ ಹಗರಣ. ಬೇಲಿಯೇ ಎದ್ದು ಹೊಲ ಮೇಯ್ದ ರೀತಿಯಲ್ಲಿ ನಡೆದಿದ್ದ ಪ್ರಕರಣದ ತನಿಖೆ‌ ದಾರಿ ತಪ್ಪಿದೆಯಾ..? ಎಂಬ ಅನುಮಾನ ದಟ್ಟವಾಗಿದೆ. ಮುಡಾ ಹಗರಣದ ಗದ್ದಲದ ನಡುವೆ ಹಳ್ಳ ಹಿಡಿಯಿತೇ ಬಹುಕೋಟಿ ಹಗರಣ..? ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಸ್ತಿವಿ ನೋಡಿ..

ಎಲ್ಲೆಡೆಯೂ ಬೆಳಕು ನೀಡುವ ಹೆಸ್ಕಾಂ ಇಲಾಖೆಯ ಅಡಿಯಲ್ಲಿಯೇ ಕತ್ತಲು ಆವರಿಸಿದೆ. ದೀಪದ ಅಡಿಯಲ್ಲಿ ಕತ್ತಲು ಎಂಬುವಂತೆ ಸರ್ಕಾರಿ ಕಚೇರಿಯಲ್ಲಿ ಬಹುಕೋಟಿ ಹಗರಣದ ತನಿಖೆ ಹಳ್ಳ ಹಿಡಿಯಿತೇ ಎಂಬುವಂತ ಅನುಮಾನ ಸಹಜವಾಗಿದೆ.

2007 ರಿಂದ 2023ರ ಜುಲೈ 13ರ ಒಳಗೆ ನಡೆದಿದ್ದ ಬಹುಕೋಟಿ ಹಗರಣ, ಮುಡಾ ಹಗರಣದ ಭರಾಟೆಯಲ್ಲಿ ಬೆನ್ನ ಹಿಂದೆ ಸರಿಯಿತೇ..? ಬಹುಕೋಟಿ ಹಗರಣದ ತನಿಖೆಯನ್ನೇ ಮರೆತರಾ ಹೆಸ್ಕಾಂ ಅಧಿಕಾರಿಗಳು..? ಎಂಬುವಂತ ಪ್ರಶ್ನೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕ ಭಾಗದ ಏಳು ಜಿಲ್ಲೆಯ ವ್ಯಾಪ್ತಿಯನ್ನ ಹೊಂದಿರುವ ಹೆಸ್ಕಾಂ ಇಲಾಖೆಯಲ್ಲಿ ನಡೆದಿತ್ತು ಬರೊಬ್ಬರಿ 51 ಕೋಟಿ ರೂಪಾಯಿ ಹಗರಣ.‌ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಉಗ್ರಾಣದಲ್ಲಿ ನಡೆದಿದ್ದ 51 ಕೋಟಿ ರೂಪಾಯಿ ಹಗರವಣನ್ನೇ ಮರೆತು ಬಿಟ್ಟ ಹೆಸ್ಕಾಂ ಅಧಿಕಾರಿಗಳು...? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ನಕಲಿ ಬಿಲ್ ಗಳನ್ನ ಸೃಷ್ಠಿ ಮಾಡಿ ಬಹುದೊಡ್ಡ ಹಗರಣ ಎಸಗಿದ್ದ ಹೆಸ್ಕಾಂ‌ ಅಧಿಕಾರಿಗಳು, ಟ್ರಾನ್ಸ್ ಫಾರ್ಮರ್ ಮತ್ತು ಸಾಮಗ್ರಿಗಳ‌ ಹೆಸರಲ್ಲಿ ಬಹುದೊಡ್ಡ ಹಗರಣ ಎಸಗಿದ್ದರು. ಹಗರಣ ನಡೆದು ಎರಡೂ ವರ್ಷ ಕಳೆದ್ರೂ ಸರ್ಕಾರದ ಬೊಕ್ಕಸಕ್ಕೆ 51 ಕೋಟಿ ರೂಪಾಯಿ ಮರಳಿ ಬಂದಿಲ್ಲ. ಆದರೆ ಈ ಬಗ್ಗೆ ತನಿಖೆ ಮಾಡ್ತಿನಿ ಅಂತಾರೇ ನೂತನ ಅಧ್ಯಕ್ಷರು.

ಇನ್ನೂ 51 ಕೋಟಿ ಹಗರಣದಲ್ಲಿ ಭಾಗಿಯಾಗಿದ್ದ ಐವರನ್ನು ಈ ಹಿಂದೆ ಅಮಾನತ್ತು ಮಾಡಿದ್ದ ಹೆಸ್ಕಾಂ‌ ಅಧಿಕಾರಿಗಳು, ಪ್ರಕರಣದಲ್ಲಿ ಭಾಗಿಯಾಗಿದ್ದ 27 ಜನ, ಆದ್ರೆ ಅಮಾನತು ಆಗಿದ್ದು 5 ಜನ ಮಾತ್ರ‌.

ಅಲ್ಲದೇ ನಿವೃತ್ತ ಓರ್ವ ಅಧಿಕಾರಿಯ ಮೇಲೆ ಹುಬ್ಬಳ್ಳಿಯ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮತ್ತೇ ಇದೀಗ ಅಮಾನತ್ತಾದ ಅಧಿಕಾರಿಗಳು ಮತ್ತೆ ತಮ್ಮ‌ ಕಾರ್ಯಸ್ಥಳಕ್ಕೆ ಮರಳಿ ನೇಮಕವಾದ್ರೂ ಸಮಗ್ರ ತನಿಖೆ ಕೈಗೊಂಡಿಲ್ಲ.

ಒಟ್ಟಿನಲ್ಲಿ ಕಾಟಾಚಾರಕ್ಕೆ ಐವರನ್ನ ಅಮಾನತು ಮಾಡಿ ಕೈತೊಳೆದುಕೊಂಡಿದ್ದ ಹೆಸ್ಕಾಂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಇನ್ನಾದರೂ ಈ ಬಗ್ಗೆ ಸೂಕ್ತ ತನಿಖೆ ಮಾಡಿ ಸರ್ಕಾರದ ಬೊಕ್ಕಸಕ್ಕೆ 51 ಕೋಟಿ ಹಣ ಸಂದಾಯ ಮಾಡುವ ಕಾರ್ಯ ಮಾಡಬೇಕಿದೆ. ಅಲ್ಲದೇ ಇಲಾಖೆಯಲ್ಲಿ ಮತ್ತಷ್ಟು ಶಿಸ್ತು ಕ್ರಮಗಳನ್ನು ಜರುಗಿಸುವ ಕಾರ್ಯ ಮಾಡಬೇಕಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/12/2024 02:20 pm

Cinque Terre

36.57 K

Cinque Terre

4

ಸಂಬಂಧಿತ ಸುದ್ದಿ