ಹುಬ್ಬಳ್ಳಿ: ಫೆಂಗಲ್ ಚಂಡಮಾರುತದಿಂದ ವಿದ್ಯುತ್ ಅವಘಡ ಆಗದಂತೆ ಕಾಳಜಿ ವಹಿಸಿಕೊಳ್ಳಬೇಕು. ಇಂತಹ ಅವಘಡ ಆಗುವ ಮುನ್ಸೂಚನೆ ಕಂಡರೆ ಅಧಿಕಾರಿಗಳು ಖುದ್ದಾಗಿ ಹಾಜರಾಗಿ ಸರಿ ಮಾಡಬೇಕೆಂದು ಹೆಸ್ಕಾಂ ನೂತನ ಅಧ್ಯಕ್ಷ ಸಯ್ಯದ್ ಅಜಂಫೀರ್ ಖಾದ್ರಿ ಹೆಸ್ಕಾಂ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಮುಖಾಂತರ ಅಧಿಕಾರಿಗಳಿಗೆ ಸೂಚನೆ ನೀಡಿದ ಖಾದ್ರಿ, ಫೆಂಗಲ್ ಚಂಡಮಾರುತ ಭಾರಿ ಪ್ರಮಾಣದಲ್ಲಿ ನಮ್ಮ ರಾಜ್ಯಕ್ಕೆ ಅಪ್ಪಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು, ಶಾಲಾ ಮಕ್ಕಳು ಸಾರ್ವಜನಿಕರು ವಿದ್ಯುತ್ ಸಂಪರ್ಕದಿಂದ ಅಪಘಾತ ಆಗದಂತೆ ಆ ನಿಟ್ಟಿನಲ್ಲಿ ಕಾಳಜಿ ವಹಿಸಬೇಕೆಂದು ಮನವಿ ಮಾಡಿದರು. ರೈತರನ್ನ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ, ಇದಕ್ಕಾಗಿ ಲೋಪ ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆಯಿಂದ ಕ್ರಮಗಳನ್ನ ತೆಗೆದುಕೊಳ್ಳಬೇಕು. ಫೆಂಗಲ್ ಚಂಡಮಾರುತದಿಂದ ರಾಜ್ಯ ಸರ್ಕಾರ ಬಹಳಷ್ಟು ಎಚ್ಚರಿಕೆಗೊಳಿಸಿದೆ. ಹೆಸ್ಕಾಂ ಕೂಡ ಇದಕ್ಕೆ ಸನ್ನದ್ಧವಾಗಿದೆ ಎಂದ ಖಾದ್ರಿ.
Kshetra Samachara
04/12/2024 01:25 pm