ಧಾರವಾಡ : ಹತ್ತಿ ಬೆಲೆ ದಿಢೀರ್ ಕುಸಿದಿದ್ದರಿಂದ ಅನ್ನದಾತರು ಹತ್ತಿ ಫ್ಯಾಕ್ಟರಿ ಮುಂದೆಯೇ ಧರಣಿ ನಡೆಸಿದ ಪ್ರಸಂಗ ಧಾರವಾಡ ತಾಲೂಕಿನ ಮರೇವಾಡ ಗ್ರಾಮದಲ್ಲಿ ನಡೆದಿದೆ.
ಮರೇವಾಡ ಗ್ರಾಮದಲ್ಲಿರುವ ಹತ್ತಿ ಜಿನ್‌ಗೆ ಬೇರೆ ಬೇರೆ ಗ್ರಾಮಗಳಿಂದ ರೈತರು ಹತ್ತಿ ಮಾರಾಟಕ್ಕೆಂದು ತಂದಿದ್ದರು. ಪ್ರತಿ ಕ್ವಿಂಟಾಲ್ ಹತ್ತಿಗೆ ಮೊದಲು 7100 ರೂಪಾಯಿ ದರ ಇದೆ ಎಂದು ಹೇಳಲಾಗಿತ್ತು. ರೈತರು ಫ್ಯಾಕ್ಟರಿಗೆ ಹತ್ತಿ ತೆಗೆದುಕೊಂಡು ಹೋದಾಗ ಅಲ್ಲಿನ ಸಿಬ್ಬಂದಿ 6700, 6800 ರೂಪಾಯಿಗೆ ಹತ್ತಿ ಖರೀದಿಸಲು ಮುಂದಾಗಿದ್ದರು. ಇದರಿಂದ ರೊಚ್ಚಿಗೆದ್ದ ರೈತರು ದರ ಹೇಳುವುದೊಂದು ಖರೀದಿ ಮಾಡುವುದೊಂದು ಎಂದು ಫ್ಯಾಕ್ಟರಿ ಗೇಟ್ ಹಾಕಿ ಕೆಲ ಕಾಲ ಪ್ರತಿಭಟನೆ ನಡೆಸಿದರು.
ನಂತರ ಫ್ಯಾಕ್ಟರಿ ಸಿಬ್ಬಂದಿ ರೈತರ ಮನವೊಲಿಸಿ ಮೊದಲು ಹೇಳಿದ ದರದಲ್ಲೇ ಅಂದರೆ ಪ್ರತಿ ಕ್ವಿಂಟಾಲ್ ಹತ್ತಿಗೆ 7100 ರೂಪಾಯಿ ನೀಡಿಯೇ ಖರೀದಿ ಮಾಡಲಾಗುವುದೆಂದು ಭರವಸೆ ಕೊಟ್ಟ ನಂತರವೇ ರೈತರು ತಮ್ಮ ಪ್ರತಿಭಟನೆ ಕೈಬಿಟ್ಟ ಪ್ರಸಂಗ ನಡೆದಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/12/2024 08:05 pm