ಹುಬ್ಬಳ್ಳಿ : ವಕ್ಫ್ ವಿಚಾರದಲ್ಲಿ ಗೊಂದಲ ಆರಂಭವಾಗಿದೆ. ರಾಜ್ಯದಲ್ಲಿ ರೈತರ ಜಮೀನು ವಕ್ಫ್ ಹೆಸರಲ್ಲಿ ಕಬಳಿಸುವ ಕಾರ್ಯವಾಗಿದೆ. 10-12 ಶತಮಾನದ ಮಠಮಾನ್ಯದ ಆಸ್ತಿಯ ಪಹಣಿಯಲ್ಲಿ ಹೆಸರು ಸೇರಿಸಿದ್ದಾರೆ. ಈ ನಿಟ್ಟಿನಲ್ಲಿ ಮೂರು ತಂಡದಲ್ಲಿ ಬಿಜೆಪಿ ವಕ್ಫ್ ವಿರುದ್ಧ ಅಭಿಯಾನ ಆರಂಭ ಮಾಡಿದ್ದೇವೆ ಎಂದು ವಿಧಾನ ಪರಿಷತ್ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ನಗರದಲ್ಲಿಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಿಶ್ರಿಕೋಟಿಯಲ್ಲಿ ಜನರ ಅಹವಾಲು ಸ್ವೀಕಾರ ಮಾಡಲಾಗಿದೆ. ದೇವಸ್ಥಾನ, ಗರಡಿಮನೆ, ಸರ್ಕಾರಿ ಸಂಘದ ಸ್ಥಳಗಳನ್ನು ವಕ್ಫ್ ಆಸ್ತಿ ಎಂದು ನಮೂದು ಮಾಡಿದ್ದಾರೆ. ಇದು ಈಗ ಸದ್ಯಕ್ಕೆ ಇತ್ಯರ್ಥವಾಗಬೇಕಿದೆ.1954ರಿಂದ ಇತ್ತಿಚೆಗೆ ಇದಕ್ಕೆ ಜೀವ ಕೊಟ್ಟಿದ್ದು ಕಾಂಗ್ರೆಸ್ ಪಾರ್ಟಿ. ಇಂದಿರಾಗಾಂಧಿ ಸರ್ವೇ ಆಧಾರದ ಮೇಲೆ 1974ರಲ್ಲಿ ಕಾಂಗ್ರೆಸ್ ಸರ್ಕಾರ ಗೆಜೆಟ್ ಮಾಡಿದ್ದಾರೆ ಎಂದರು.
ಸರ್ಕಾರದ ನಿರ್ದೇಶನದ ಮೇರೆಗೆ ಅಧಿಕಾರಿಗಳು ಅಂದೇ ನಮೂದು ಮಾಡಿದ್ದಾರೆ. ಈಗ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸೈತಾನರಿಗೆ ವಕ್ಫ್ ಆಸ್ತಿ ಕಾಣಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪರಮಾಧಿಕಾರ ಕೋರ್ಟಿಗೆ ಮಾತ್ರವೇ ಇದೆ. ಕಾಂಗ್ರೆಸ್ ವಕ್ಫ್ ಗೆ ಸರ್ವಾಧಿಕಾರ ನೀಡಿದೆ. ಇದಕ್ಕೆ ಫುಲ್ ಸ್ಟಾಪ್ ಬೀಳದೇ ಇದ್ದರೇ ರೈತರು ಆಸ್ತಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಮೀರ್ ಅಹ್ಮದ್ ಅವರು ಮುಖ್ಯಮಂತ್ರಿ ಆದೇಶದ ಮೇಲೆ ಮಾಡ್ತಿದ್ದೀನಿ ಅಂದಿದ್ದಾರೆ. ಸಿಎಂ ಅವರು ಕಲಂ 11ರಲ್ಲಿ ವಕ್ಫ್ ಅಂತ ತೆಗೆಯುತ್ತೇವೆ ಅಂತಾರೇ. ಗೆಜೆಟ್ ನಲ್ಲಿಯೇ ಇದರ ಇತ್ಯರ್ಥವಾಗಬೇಕು. ಅಂದಾಗಲೇ ರೈತರಿಗೆ ಜಮೀನು ಸಿಗುತ್ತೇ. ಕಾಂಗ್ರೆಸ್ ರೈತರ ಆಸ್ತಿ ಕಬಳಿಸುವ ಕಾರ್ಯ ಮಾಡ್ತಿದೆ. ಅನ್ನದಾತನ ಹಾಗೂ ದೇವಸ್ಥಾನಗಳನ್ನು ಒಕ್ಕಲೆಬ್ಬಿಸುವ ಕಾರ್ಯವನ್ನು ಮಾಡ್ತಿದೆ. 1974ರ ಗೆಜೆಟ್ ರದ್ದು ಪಡಿಸಿ ರೈತರ ಹಾಗೂ ಸಮಾಜದ ಹಿತವನ್ನು ಕಾಪಾಡಬೇಕು. ಇಸ್ಲಾಂ ಕಾನೂನಿನಲ್ಲಿ, ಯಾವುದೇ ವ್ಯಕ್ತಿ ಇಸ್ಲಾಂ ಧರ್ಮದ ಪಾಲಿಸದೇ ಇದ್ದರೇ ಪಾಪಿಗಳು. ಅವರಿಂದ ಯಾವುದೇ ದಾನ ಧರ್ಮ ತೆಗೆದುಕೊಳ್ಳಬಾರದು ಎಂಬುವುದು ಇದೆ. ಹೀಗಿದ್ದರೂ ವಕ್ಫ್ ಆಸ್ತಿ ಕಬಳಿಸಲು ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/12/2024 03:44 pm