ಹಾವೇರಿ: ಸಚಿವ ಜಮೀರ್ ಅಹ್ಮದ್ ನಂಬಿದರೆ, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನ ಸ್ಥಿತಿ ಅಧೋಗತಿಯಾಗುತ್ತದೆ. ಜಮೀರ್, ಸಿಎಂ ಸಿದ್ದರಾಮಯ್ಯ ಅವರ ಕುತ್ತಿಗೆಗೆ ತರುತ್ತಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಅಭಿಪ್ರಾಯ ಪಟ್ಟರು.
ಲ್ಯಾಂಡ್ ಜಿಹಾದ್ ಮಾಡೋದಕ್ಕೆ ಹಾಗೂ ಮತದ ಆಸೆಗೆ ಕಾಂಗ್ರೆಸ್ ಏನೋ ಬೇಕಾದರೂ ಮಾಡುತ್ತೆ. ವಕ್ಫ್ ಬೋರ್ಡ್ ಆಸ್ತಿ ವಿವಾದ ಸಂಬಂಧಿಸಿ ಸಿವಿಲ್ ಕೋರ್ಟ್ ಗೆ ಹೋಗುವ ಅವಕಾಶ ಇಲ್ಲ. ಕುರಿ ಹೊಡೆದುಕೊಂಡು ತೋಳನ ಕೈಯಲ್ಲಿ ನ್ಯಾಯ ಕೇಳುವಂತಾಗಿದೆ ಎಂದು ಸಿ.ಟಿ.ರವಿ ಆರೋಪಿಸಿದರು.
PublicNext
04/12/2024 09:34 pm