ಹಾವೇರಿ: ಸಿಎಂ ಆಗಲಿಕ್ಕೆ ಆಸೆ ಇದೆ. ಕೆಪಿಸಿಸಿ ಅಧ್ಯಕ್ಷ ಆಗಲಿಕ್ಕೆ ಆಸೆ ಇದೆ, ಮಂತ್ರಿ ಆಗಲಿಕ್ಕೂ ಆಸೆ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ಆದರೆ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿ. ಪಕ್ಷದ ತೀರ್ಮಾನವೇ ಅಂತಿಮ ಎಂದು ತಿಳಿಸಿದರು.
ಈ ಹಿಂದೆ ಸಿಎಂ ಆಗ್ತಾರೆ ಅಂತ ಹೇಳಿ ಹೆಸರು ಓಡಾಡ್ತು. ಈಗ ಅಧ್ಯಕ್ಷ ಆಗ್ತಾರೆ ಅಂತ ಹೆಸರು ಓಡಾಡ್ತಾ ಇದೆ. ಇದು ನಮ್ಮ ಉತ್ಸಾಹ ಅಷ್ಟೇ. ಅಂತಿಮವಾಗಿ ಪಕ್ಷವೇ ತೀರ್ಮಾನ ಮಾಡಬೇಕು. ನಾವೆಲ್ಲ ಕಾದು ನೋಡಬೇಕು ಅಷ್ಟೇ ಎಂದು ಸಚಿವ ಸತೀಶ್ ತಿಳಿಸಿದರು.
ಕಾಂಗ್ರೆಸ್ ಸಮಾವೇಶ ಡಿಸೆಂಬರ್ 5 ಅಥವಾ 8 ಖಚಿತ ಇಲ್ಲ, ಹೇಳುತ್ತಿದ್ದಾರೆ ಎಂದು ಸಚಿವ ಜಾರಕಿಹೊಳಿ ತಿಳಿಸಿದರು. ಸಮಾವೇಶದ ಬಗ್ಗೆ ಅಧ್ಯಕ್ಷರು ಇದ್ದಾರೆ. ಸಿಎಂ ಇದ್ದಾರೆ ಅವರು ತೀರ್ಮಾನ ಮಾಡುತ್ತಾರೆ ಎಂದರು.
PublicNext
29/11/2024 08:07 pm