ಶಿಗ್ಗಾವಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವದ ವೇದಿಕೆಗೆ ನನ್ನನ್ನು ಆಹ್ವಾನಿಸಿಲ್ಲ.
ನಾನು ಬಂದರೂ ಯಾರೂ ಬಂದು ಸ್ವಾಗತಿಸಲಿಲ್ಲ ಎಂದು ಕ್ಯಾತೆ ತೆಗೆದ ನೂತನ ಶಾಸಕ ಯಾಸೀರ್ ಖಾನ್ ಪಠಾಣ್ ಜತೆಗೆ
ವಿವಿ ಸಿಬ್ಬಂದಿ ಮೇಲೆ ಪಠಾಣ್ ಬೆಂಬಲಿಗರು ದರ್ಪ ತೋರಿದ್ದಾರೆ.
ಜಾನಪದ ವಿವಿ ಆವರಣದಲ್ಲಿ ಜಾನಪದ ಶೈಲಿಯಲ್ಲಿ ನಡೆದ ಮೆರವಣಿಗೆಯಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ ಪಾಲ್ಲೊಂಡಿದ್ದರು. ಮೆರವಣಿಗೆ ವೇದಿಕೆಯತ್ತ ಸಾಗುತ್ತಿದ್ದಾಗ ಸ್ಥಳಕ್ಕೆ ಶಾಸಕ ಯಾಸೀರ್ ಖಾನ್ ಪಠಾಣ್ ಆಗಮಿಸಿದರು.
ಸಚಿವರನ್ನು ಭೇಟಿಯಾಗಿ ಬಳಿಕ ಹಿಂದೆ ಬಂದ ಶಾಸಕರು, ಬೆಂಬಲಿಗರೊಂದಿಗೆ ಗುಂಪು ಸೇರಿ ಘಟಿಕೋತ್ಸವದ ವೇದಿಕೆ ಮುಂದೆ ತಕರಾರು ತೆಗೆದರು!
ನನ್ನನ್ನು ವೇದಿಕೆ ಕರೆದಿಲ್ಲ. ನಾನು ಕಾಲೇಜ್ ಗೆ ಬಂದರೂ ಯಾರೂ ಸ್ವಾಗತಿಸಲಿಲ್ಲ. ನಿಮಗೆ ಮುಂದೆ ಐತಿ ಎಂದ ಶಾಸಕರೊಂದಿಗೆ ಸೇರಿ ಶಾಸಕರ ಬೆಂಬಲಿಗರೂ ಆವಾಜ್ ಹಾಕಿದರು. ಅಲ್ಲದೆ, ನಮ್ಮ ಶಾಸಕರ ಹೆಸರನ್ನು ಕಾರ್ಡ್ ನಲ್ಲಿ ಹಾಕಿಲ್ಲ ಎಂದು ವಿವಿ ವಿರುದ್ಧ ಶಾಸಕರ ಬೆಂಬಲಿಗರು ಧಿಕ್ಕಾರ ಕೂಗಿದರು.
ಇದನೆಲ್ಲ ನೋಡುತ್ತಿದ್ದ ವಿದ್ಯಾರ್ಥಿಗಳು ಹಾಗೂ ಸಭಿಕರು ಏನಿದು? ಶಾಸಕರಿಗೆ ಘಟಿಕೋತ್ಸವದ ಶಿಷ್ಟಾಚಾರವೇ ಗೊತ್ತಿಲ್ಲವೇ? ಎಂದು ಮಾತನಾಡುತ್ತಿರುವುದು ಕೇಳಿ ಬಂತು.
PublicNext
02/12/2024 05:57 pm