ಹಾನಗಲ್ಲ: ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಹಾನಗಲ್ಲ ಬಸ್ ಡಿಪೋಗೆ ಮತ್ತೆ ಹೊಸದಾಗಿ 4 ಬಸ್‌ಗಳನ್ನು ಶಾಸಕ ಶ್ರೀನಿವಾಸ ಮಾನೆ ಹಸ್ತಾಂತರಿಸಿದರು.
ಇತ್ತೀಚಿಗಷ್ಟೇ 8 ಬಸ್‌ಗಳನ್ನು ಹಸ್ತಾಂತರಿಸಿದ್ದನ್ನು ಸ್ಮರಿಸಬಹುದು. ಈ ಸಂದರ್ಭದಲ್ಲಿ ಶಾಸಕ ಮಾನೆ ಮಾತನಾಡಿ ಹಿಂದಿನ ಸರ್ಕಾರದ ಸಂದರ್ಭದಲ್ಲಿ ಒಂದೂ ಸಹ ಹೊಸ ಬಸ್ ಲಭಿಸಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಒಟ್ಟು 12 ಹೊಸ ಬಸ್‌ಗಳನ್ನು ದೊರಕಿಸಿರುವುದರಿಂದ ಡಿಪೋದಲ್ಲಿ ಬಸ್‌ಗಳ ಸಂಖ್ಯೆ 97 ಕ್ಕೇರಿದೆ. ಇನ್ನೂ 8 ಬಸ್‌ಗಳನ್ನು ದೊರಕಿಸಿದರೆ ಸಮರ್ಪಕವಾಗಿ ಅಗತ್ಯ ಮಾರ್ಗಗಳಲ್ಲಿ ಓಡಿಸಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಬಸ್‌ಗಳನ್ನು ದೊರಕಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದ ಅವರು ಹೊಸ ಬಸ್‌ಗಳನ್ನು ಕೆಲ ದಿನಗಳ ಕಾಲ ತಾಲೂಕಿನ ವಿದ್ಯಾರ್ಥಿಗಳ ಪ್ರವಾಸಕ್ಕೆ ಬಳಸಿಕೊಂಡು ನಂತರ ಮಾರ್ಗಗಳನ್ನು ಗುರುತಿಸಿ, ಓಡಿಸಲಾಗುವುದು ಎಂದು ತಿಳಿಸಿದರು.
Kshetra Samachara
03/12/2024 06:40 pm