ಹಾವೇರಿ: ಸಚಿವ ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷರಾಗುವ ಕೆಪ್ಯಾಬಿಲಿಟಿ ಇದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅಭಿಪ್ರಾಯ ಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಹುಲಗೂರಲ್ಲಿ ಮಾತನಾಡಿದ ಜಮೀರ್, ಆದರೆ ತೀರ್ಮಾನ ಮಾಡಬೇಕಿರೋದು ಹೈಕಮಾಂಡ್ ಎಂದು ತಿಳಿಸಿದರು.
ಶಿಗ್ಗಾಂವ್ ಗೆಲುವಿಗೆ ಸತೀಶ್ ಜಾರಕಿಹೊಳಿ ಸಾಹುಕಾರ್ ಕಾರಣ ಎಂದ ಜಮೀರ್, ಹಾಸನದಲ್ಲಿ ಸಮಾವೇಶ ಮಾಡಬೇಕು ಅಂತ ಕೆಲ ಹಿರಿಯರು ಸಲಹೆ ನೀಡಿದ್ದಾರೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಶಕ್ತಿ ಸಮಾವೇಶ ಅಂತ ಅಲ್ಲ, ಸಮಾವೇಶ ಮಾಡುವ ಬಗ್ಗೆ ಚರ್ಚೆ ನಡೆದಿದೆ. ನನಗೆ ಇನ್ನೂ ಅಷ್ಟು ಮಾಹಿತಿ ಇಲ್ಲ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದರು. ವಕ್ಫ್ ಆಸ್ತಿ1 ಲಕ್ಷ 12 ಸಾವಿರ ಎಕರೆ ಇತ್ತು. ಈಗ 23000 ಎಕರೆ ಮಾತ್ರ ಇದೆ. ಅಲ್ಪ ಸಂಖ್ಯಾತರೇ ಒತ್ತುವರಿ ಮಾಡಿದ್ದಾರೆ. ಅದನ್ನು ನಾವು ತೆರವು ಮಾಡುತ್ತಿದ್ದೇವೆ. ರೈತರು ನಮಗೆ ಅನ್ನ ಕೊಡೋ ಅನ್ನದಾತರು,
ಅವರನ್ನು ಮುಟ್ಟೋಕೆ ಸಾಧ್ಯವಾ? ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.
PublicNext
29/11/2024 09:23 pm