ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ: ಬಿಜೆಪಿಯಿಂದ ಉಚ್ಚಾಟನೆ ವಿರುದ್ಧ ಬೆಂಬಲಿಗರಿಂದ ಪಂಜಿನ ಮೆರವಣಿಗೆ

ಶಿಗ್ಗಾವಿ : ಪಟ್ಟಣದ ಚನ್ನಮ್ಮ ವೃತ್ತದಿಂದ ಹಿಡಿದು ಹಳೆಯ ಬಸ್ ಸ್ಟ್ಯಾಂಡ್ ಸರ್ಕಲ್ ನ ವರೆಗೆ ಬಿಜೆಪಿ ಪಕ್ಷದಿಂದ ಉಚ್ಚಾಟನೆಯಾದ ಶ್ರೀಕಾಂತ್ ದುಂಡಿಗೌಡರ ಹಾಗೂ ಸಂಗಮೇಶ ಕಂಬಾಳಿಮಠ ಬೆಂಬಲಿಗರು ಪಂಜು ಹಿಡಿದು ಬಿಜೆಪಿ ಜಿಲ್ಲಾಧ್ಯಕ್ಷರ ವಿರೋಧವಾಗಿ ಪಂಜಿನ ಮೆರವಣಿಗೆ ಮಾಡಿದರು.

ಬಿಜೆಪಿ ಸೋಲಿಗೆ ಪಕ್ಷದ ಆಂತರಿಕ ಜಗಳ ಮತ್ತು ಏಕವ್ಯಕ್ತಿಯ ನಾಯಕತ್ವ, ಪ್ರಭಾವಿ ನಾಯಕರ ಕಡೆಗಣನೆಯಿಂದಾಗಿ ಸೋತಿದ್ದಾರೆ ಹೊರತು ಶ್ರೀಕಾಂತ್ ದುಂಡಿಗೌಡರ ಹಾಗೂ ಸಂಗಮೇಶ ಕಂಬಾಳಿಮಠ ಕಾರಣರಲ್ಲ ಎಂದು ಅವರ ಬೆಂಬಲಿಗರು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನಾದರೂ ಎಚ್ಚೆತ್ತುಕೊಂಡು ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪೂಜಾರ್ ತಮ್ಮ ಹೇಳಿಕೆಯನ್ನು ಹಿಂಪಡೆದು ಅವರ ಮೇಲಿನ ಆರೋಪಗಳು ಸುಳ್ಳೆಂದು ಹೇಳಿ ಉಚ್ಚಾಟನೆ ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟವನ್ನು ಮಾಡೋದಾಗಿ ತಿಳಿಸಿದರು.

ಮುಂಬರುವ 2028ರ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀಕಾಂತ್ ದುಂಡಿಗೌಡ್ರ ಕೈ ಬಲಪಡಿಸಿ ಅವರನ್ನು ಎಂಎಲ್ಎ ಮಾಡಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದರು.

Edited By : Ashok M
PublicNext

PublicNext

02/12/2024 07:34 am

Cinque Terre

23.24 K

Cinque Terre

0

ಸಂಬಂಧಿತ ಸುದ್ದಿ