ಹಾವೇರಿ : 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಭೂಮಾಪಕ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಹಾವೇರಿಯಲ್ಲಿ ನಡೆದಿದೆ. ಅಶೋಕ ಎಚ್.ಜಿ ಎಂಬ ಭೂಮಾಪಕ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ.
ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದ ಮಂಜುನಾಥ ಕಡ್ಲಿ ಎಂಬ ರೈತ ತಮ್ಮ ತಂದೆಯವರಿಗೆ ಸಂಬಂಧಿಸಿದ ಜಮೀನಿನ ವಾಟ್ನಿ ಮಾಡಿಸಲು ನಕಾಶೆ ಪೂರೈಸಲು ಅರ್ಜಿ ಸಲ್ಲಿಸಿದ್ದರು. ಆದರೆ ಭೂಮಾಪಕ ಅಶೋಕ ನಕಾಶೆ ಪೂರೈಸಲು ಮೂವತ್ತು ಸಾವಿರ ರುಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟು, 25 ಸಾವಿರ ಲಂಚದ ಹಣಕ್ಕೆ ಒಪ್ಪಿಕೊಂಡಿದ್ದ.
ಶನಿವಾರ ಮುಂಗಡವಾಗಿ ಹದಿನೈದು ಸಾವಿರ ರುಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಹಾವೇರಿ ನಗರದ ಡಿ.ಸಿ ಕಚೇರಿ ರಸ್ತೆಯಲ್ಲಿ ಲೋಕಾಯುಕ್ತ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ, ಆರೋಪಿ ಭೂಮಾಪಕನನ್ನು ಬಂಧಿಸಿದ್ದಾರೆ.
PublicNext
30/11/2024 09:08 pm