ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾಂವಿ: HIV ಸೋಂಕಿತರನ್ನು ಪ್ರೀತಿ, ವಿಶ್ವಾಸದಿಂದ ಕಾಣಿರಿ - ನ್ಯಾಯಾಧೀಶ ಸುನೀಲ ತಳವಾರ

ಶಿಗ್ಗಾಂವಿ : ಹೆಚ್.ಐ.ವ್ಹಿ ಸೋಂಕಿತರನ್ನು ಪ್ರೀತಿ, ವಿಶ್ವಾಸದಿಂದ ಕಂಡಾಗ ಮಾತ್ರ ಅವರು ನಮ್ಮಂತೆ ಮುಖ್ಯವಾಹಿನಿಗೆ ಬರುತ್ತಾರೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಸುನೀಲ ತಳವಾರ ಹೇಳಿದ್ದಾರೆ.

ಶಿಗ್ಗಾಂವಿಯ ಜೆ.ಎಂ.ಜೆ ಮಹಾವಿದ್ಯಾಲಯದಲ್ಲಿ ನಡೆದ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರಂತೆ ಹೆಚ್‌.ಐ.ವ್ಹಿ ಸೋಂಕಿತರು ಸಹಿತ ಬದುಕಿ ಬಾಳಬೇಕು ಅಂದಾಗ ಮಾತ್ರ ಸಮಾನತೆಗೆ ಅರ್ಥ ಬರುತ್ತದೆ ಹಾಗೂ ಕಾನೂನು ಬಗ್ಗೆ ಮಾಹಿತಿಯನ್ನು ಪಡೆದುಕೊಂಡರೆ ಒಳ್ಳೆಯದು ಎಂದರು.

ಶಿಗ್ಗಾಂವಿ ತಾಲೂಕು ಆರೋಗ್ಯಾಧಿಕಾರಿ ಡಾ ಸತೀಶ್ ಮಾತನಾಡಿ, ವಿದ್ಯಾರ್ಥಿಗಳು ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಹಾಗೂ ಸರಕಾರಿ ಆಸ್ಪತ್ರೆಯ ಬಗ್ಗೆ ಇರುವ ಕೀಳರಿಮೆಯನ್ನು ಇಂದಿನ ಯುವ ಸಮುದಾಯ ತೊಡೆದು ಹಾಕಬೇಕು. ಆರೋಗ್ಯದ ಬಗ್ಗೆ ಮುಂಜಾಗ್ರತೆವಹಿಸಿದರೆ ಅನಾರೋಗ್ಯದಿಂದ ದೂರ ಇರಬಹುದು ಎಂದು ಕಿವಿ ಮಾತು ಹೇಳಿದರು.

ತಜ್ಞ ವೈದ್ಯೆ ಡಾ.ರಾಜೇಶ್ವರಿ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಹೀಗಾಗಿ ಮಕ್ಕಳು ಎಲ್ಲ ವಿಷಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು ಮತ್ತು ಹೆಚ್.ಐ.ವ್ಹಿ ಸೋಂಕಿತರ ಬಗ್ಗೆ ಕಳಂಕ ಮತ್ತು ತಾರತಮ್ಯದಿಂದ ನೋಡದೇ ಪ್ರೀತಿ ವಿಶ್ವಾಸದಿಂದ ಕಾಣೋಣ ಎಂದರು.

ಎ.ಆರ್.ಟಿ ಹಿರಿಯ ಆಪ್ತಸಮಾಲೋಚಕ ಸುಧಾಕರ ದೈವಜ್ಞ ಮಾತನಾಡಿ, ಸೋಂಕಿತರಿಗೆ ಅನೇಕ ಸೌಲಭ್ಯಗಳು ಇದ್ದು ಅದರ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ದಿವಾಣಿ ನ್ಯಾಯಾಧೀಶರಾದ ಅಶ್ವೀನಿ ಚಂದ್ರಕಾಂತ, ಪ್ರಾಂಶುಪಾಲರಾದ ಸಿಸ್ಟರ್ ಅನಿಜಾರ್ಜ, ನ್ಯಾಯವಾದಿ ಚೆನ್ನಮ್ಮ ಬಡ್ಡಿ, ಸುರೇಶ ಹೆಚ್, ಸರೋಜಾ ಹರಿಜನ, ಎಸ್.ಬಿ.ಕಟ್ಟಿಮನಿ, ರಾಮನಗೌಡ ಪಾಟೀಲ, ಹನುಮಂತ, ಗರೀಬಸಾಬ್, ಇಂದಿರಾ, ಪ್ರೇಮಾ ಸೇರಿದಂತೆ ಆಶಾ ಕಾರ್ಯಕರ್ತೆಯರು, ಜೆ.ಎಂ.ಜೆ.ಮಹಾವಿದ್ಯಾಲಯದ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಯೋಗ ಶಾಲಾ ತಂತ್ರಜ್ಞ ಅಧಿಕಾರಿ ಶಮ್ಸತಬರೀಜ ಸ್ವಾಗತಿಸಿದರು. ಆಪ್ತಸಮಾಲೋಚಕಿ ರೇಣುಕಾ ಹೊಸಮನಿ ಕಾರ್ಯಕ್ರಮ ನಿರ್ವಹಿಸಿದರು.

Edited By : Vijay Kumar
PublicNext

PublicNext

04/12/2024 05:00 pm

Cinque Terre

6.41 K

Cinque Terre

0