ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ಕರ್ತವ್ಯದ ವೇಳೆಯೇ ಹೃದಯಾಘಾತದಿಂದ ದೇಶನೂರಿನ ಯೋಧ ಮೃತ್ಯು

ಬೈಲಹೊಂಗಲ: ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದ ವೀರಯೋಧ ಹವಾಲ್ದಾರ್ ರಾಜು ಮಹಾದೇವ ಕಡಕೋಳ (38) ಎಂಬುವರು ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಸೋಮವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕಳೆದ 15 ವರ್ಷಗಳಿಂದ 115 ನೇ ಮರಾಠಾ ಇನ್ಫೆಂಟ್ರಿ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ವೀರಯೋಧನ ಮೃತದೇಹವು ಮಂಗಳವಾರ ಮಧ್ಯಾಹ್ನ 4 ಗಂಟೆಗೆ ಬಂದಾಗ ಕುಟುಂಬಸ್ಥರ, ದೇಶನೂರ ಗ್ರಾಮಸ್ಥರ ದುಃಖದಲ್ಲಿ ಮುಳಗಿತ್ತು.

ಹನುಮಾನ ನಗರದಿಂದ ಆರಂಭವಾದ ವೀರಯೋಧನ ಮೃತದೇಹದ ಮೆರವಣಿಗೆ ಅಮರ್‌ ರಹೇ ರಾಜು ಕಡಕೋಳ ಅಮರ್‌ ರಹೇ ಎಂಬ ಘೋಷನೆಯೊಂದಿಗೆ ಕರ್ನಲ್ ವಿಕ್ರಂ ಶೆಂಗಾ ಸಂತಲಾ ನೇತೃತ್ವದಲ್ಲಿ ಮಿಲಿಟರಿ ಅಧಿಕಾರಿಗಳು, ಜವಾನ ಯೋಧರ ಪರೆಡ ಮೂಲಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ನಾನಾಸಾಹೇಬ ಪಾಟೀಲ, ದೇಶನೂರ, ಮೋಹರೆ, ನೇಸರಗಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಸದಸ್ಯರು, ನಿವೃತ್ತ ಸೈನಿಕರು, ಕಾರ್ಯನಿರತ ಸೈನಿಕರು, ಮೃತ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.ಮೃತರು ಪತ್ನಿ, ಸಹೋದರ, ಸಹೋದರಿಯರು ಅಪಾರ ಬಳಗವನ್ನು ಅಗಲಿದ್ದಾರೆ.

Edited By : Manjunath H D
PublicNext

PublicNext

03/12/2024 10:30 pm

Cinque Terre

30.59 K

Cinque Terre

3

ಸಂಬಂಧಿತ ಸುದ್ದಿ