ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಮಹಾಮೇಳಾವಾಗೆ ಅನುಮತಿ ನೀಡದಿದ್ದರೆ ಕರ್ನಾಟಕದ ವಾಹನಗಳಿಗೆ ಗಡಿಯಲ್ಲಿ ಪ್ರವೇಶ ಇಲ್ಲ!

ಬೆಳಗಾವಿ: ಚಳಿಗಾಲದ ಅಧಿವೇಶನದ ಪ್ರತಿಯಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ವತಿಯಿಂದ ನಡೆಸಲಾಗುವ ಮಹಾಮೇಳಾವಾಗೆ ಬೆಳಗಾವಿ ಜಿಲ್ಲಾಧಿಕಾರಿಗಳು ಅನುಮತಿ ನೀಡಬೇಕು. ಇಲ್ಲದಿದ್ದರೆ ಗಡಿಭಾಗದಲ್ಲಿ ಕರ್ನಾಟಕದ ವಾಹನಗಳಿಗೆ ಪ್ರವೇಶ ನೀಡುವುದಿಲ್ಲವೆಂದು ಕೊಲ್ಹಾಪುರ ಶಿವಸೇನೆ ಎಚ್ಚರಿಕೆಯನ್ನು ನೀಡಿದೆ.

ಡಿಸೇಂಬರ್ 9 ರಿಂದ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಪ್ರತಿವರ್ಷದಂತೆ ಈ ಬಾರಿಯೂ

ಮಹಾರಾಷ್ಟ್ರ ಏಕೀಕರಣ ಸಮಿತಿಯ ವತಿಯಿಂದ ಮಹಾಮೇಳಾವಾ ಆಯೋಜಿಸಲಾಗುತ್ತಿದೆ. ಇದಕ್ಕಾಗಿ ಬೆಳಗಾವಿ ಜಿಲ್ಲಾಧಿಕಾರಿಗಳು ಅನುಮತಿ ಕೇಳಲಾಗಿದೆ.

ಒಂದು ವೇಳೆ ಅನುಮತಿ ನೀಡದೇ ಹೋದರೆ ಅಥವಾ ಮಹಾರಾಷ್ಟ್ರದ ನಾಯಕರಿಗೆ ಬೆಳಗಾವಿ ಪ್ರವೇಶ ನಿಷೇಧಿಸಬಾರದು. ಕರ್ನಾಟಕದ ಹಲವಾರು ನಾಯಕರು ಕೊಲ್ಹಾಪುರ ಮತ್ತು ಮಹಾರಾಷ್ಟ್ರಕ್ಕೆ ಬಂದಾಗ ನಾವು ನಿಷೇಧ ಹೇರುವುದಿಲ್ಲ. ಆದರೆ ಮಹಾರಾಷ್ಟ್ರದ ನಾಯಕರಿಗೆ ಕರ್ನಾಟಕದಲ್ಲಿ ನಿಷೇಧವೇಕೆ? ಒಂದು ವೇಳೆ ನಿಷೇಧ ಹೇರಿದರೆ ಗಡಿಯಲ್ಲಿ ಕರ್ನಾಟಕದ ವಾಹನಗಳಿಗೆ ಪ್ರವೇಶ ನೀಡಲಾಗುವುದಿಲ್ಲವೆಂದು ಕೊಲ್ಹಾಪುರ ಶಿವಸೇನೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಘಟಕ ಎಚ್ಚರಿಕೆಯನ್ನು ನೀಡಿದೆ.

Edited By : Vinayak Patil
PublicNext

PublicNext

04/12/2024 08:17 am

Cinque Terre

19.74 K

Cinque Terre

1

ಸಂಬಂಧಿತ ಸುದ್ದಿ