ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ವಂಚನೆ ಪ್ರಕರಣ - ಸಚಿವ ಸತೀಶ್ ಜಾರಕಿಹೊಳಿ ಮುಂದೆ ಅಳಲು ತೊಡಿಕೊಂಡ ಮಹಿಳೆಯರು

ಬೆಳಗಾವಿ: ಬೆಳಗಾವಿಯಲ್ಲಿ ಸಾವಿರರು ಜನ ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಸಚಿವ ಸತೀಶ್ ಜಾರಕೊಹೊಳಿ ಅವರನ್ನು ಮಹಿಳೆಯರು ಭೇಟಿ ಮಾಡಿದ್ದಾರೆ.

ಬೆಳಗಾವಿ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಇರೋ ಕಾಂಗ್ರೆಸ್ ಕಚೇರಿಯಲ್ಲಿ ಸಾವಿರಾರು ಮಹಿಳೆಯರು ಸಣ್ಣಪುಟ್ಟ ಮಕ್ಕಳನ್ನು ಕಂಕಳಲ್ಲಿ ಹೊತ್ತು ಬಂದು ಸಚಿವರನ್ನ ಭೇಟಿ ಮಾಡಿ, ತಮಗಾದ ಅನ್ಯಾಯದ ಕುರಿತು ತಿಳಿಸಿದ್ದಾರೆ. ಮಹಿಳೆಯರ ಕಷ್ಟ ಆಲಿಸಿದ ಸಚಿವ ಸತೀಶ್ ಜಾರಕೊಹೊಳಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ರು.

ಈಗಾಗಲೇ ವಂಚಿಸಿದ ಮಹಿಳೆ ಯಲ್ಲವ್ವ ಬನ್ನಿಬಾಗಿ ಕಾಕತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.‌ ಈ ಪ್ರಕರಣದಲ್ಲಿ ಯಾರು ಕೂಡಾ ಅಂಜುವ ಅವಶ್ಯಕತೆ ಇಲ್ಲ, ಮಹಿಳೆಯರಿಗಾದ ಅನ್ಯಾಯ ನಮಗೆ ತಿಳಿದಿದೆ. ಫೈನಾನ್ಸ್ ನವರು ಅನಾವಶ್ಯಕವಾಗಿ ಕಿರುಕುಳು ಕೊಡದಂತೆ ನೋಡಿಕೊಳ್ಳುತ್ತೇವೆ. ಜೊತೆಗೆ ಎಲ್ಲರಿಗೂ ನ್ಯಾಯ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

Edited By : Somashekar
PublicNext

PublicNext

03/12/2024 06:15 pm

Cinque Terre

15.17 K

Cinque Terre

0

ಸಂಬಂಧಿತ ಸುದ್ದಿ