ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಅಧಿವೇಶದಲ್ಲಿ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿಲು ಆಗ್ರಹ

ಬೆಳಗಾವಿ : ಡಿ. 9 ರಂದು ನಡೆಯುವ ಚಳಿಗಾದ ಅಧಿವೇಶದಲ್ಲಿ ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಅವಶ್ಯಕ ಬೇಡಿಕೆಗಳನ್ನು ಈಡೇರಿಸಬೇಕೆಂದರು ಆಗ್ರಹಿಸಿ ಪ್ರತಿಭಟಿಸಲಾಯಿತು.‌

ಇಂದು ಉತ್ತರ ಕರ್ನಾಟಕ ಅಭಿವೃದ್ಧಿಪರ ಸಂಘಟನೆಗಳಿಂದ ನಗರದ ಕನ್ನಡ ಸಾಹಿತ್ಯ ಭವನದಿಂದ ಪ್ರತಿಭಟನೆ ಆರಂಭಿಸಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.

ಸುವರ್ಣ ಸೌಧ ಉದ್ಘಾಟನೆ ಆಗಿ 12 ವರ್ಷವಾದರುವ ಸಹ ಪ್ರತಿ ಅಧಿವೇಶನದಲ್ಲಿ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುವ ಕೆಲಸ ಆಗುತ್ತಿದೆ.‌ ಬೆಳಗಾವಿಯನ್ನು ರಾಜ್ಯದ ಎರಡನೆಯ ರಾಜ್ಯಧಾನಿಯನ್ನಾಗಿ ಮಾಡಬೇಕು. ಆಡಳಿತಾತ್ಮಕ ರಾಜ್ಯಮಟ್ಟದ ಕಚೇರಿಗಳು ಸುವರ್ಣ ಸೌಧಕ್ಕೆ ವರ್ಗಾವಣೆ ಮಾಡಬೇಕು. ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಶಾಸಕರ ಭವನ ನಿರ್ಮಿಸಬೇಕು.

ಇಂದಿನ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಆಗದೇ ಇರುವುದು ಖೇಧದ ಮತ್ತು ದುರ್ದೈವದ ಸಂಗತಿಯಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

Edited By : Shivu K
PublicNext

PublicNext

03/12/2024 03:55 pm

Cinque Terre

36.96 K

Cinque Terre

3

ಸಂಬಂಧಿತ ಸುದ್ದಿ