ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಬಣ ಸಂಘರ್ಷ ತಾರಕ್ಕಕ್ಕೆ ಏರಿದೆ ಈಗಾಗಲೇ ಯತ್ನಾಳ್ ಗೆ ಬಿಜೆಪಿ ಹೈಕಮಾಂಡ್ ನೋಟಿಸ್ ಸಹ ನೀಡಿದೆ ಆದ್ರೆ ನೋಟಿಸ್ ಬಳಿಕವೂ ಯತ್ನಾಳ್ ಎಂದಿನಂತೆ ಬಿಎಸ್ ವೈ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಇನ್ನೊಂದು ಕಡೆ ವಿಜಯೇಂದ್ರ ಪರವಾಗಿ ಯಾತ್ರೆ, ಜಿಲ್ಲಾಧ್ಯಕ್ಷರಗಳ ಶಕ್ತ ಪ್ರದರ್ಶನ ಹೀಗೆ ಬಣ ರಾಜಕೀಯ ಜೋರಾಗಿ ನಡೆಯುತ್ತಿದೆ ಇದಕ್ಕೆಲ್ಲ ಹೈಕಮಾಂಡ್ ಬ್ರೇಕ್ ಹಾಕುತ್ತಾ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಇದ್ರ ನಡಿವೆ ಇಂದು ಬಿಜೆಪಿ ಕಚೇರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತುರುಣ್ ಚುಗ್ ಆಗಮಿಸುತ್ತಿದ್ದಾರೆ.
ಶಾಸಕರು, ಪಕ್ಷದ ಪ್ರಮುಖರು, ಹಿರಿಯರ ಜೊತೆ ತರುಣ್ ಚುಗ್ ಸಮಾಲೋಚನೆ ನಡೆಸಲಿದ್ದಾರೆ. ಪಕ್ಷದ ಸದ್ಯದ ಪರಿಸ್ಥಿತಿಯ ಬಗ್ಗೆ ತರುಣ್ ಚುಗ್ ರಿಂದ ಮಾಹಿತಿ ಪಡೆಯಲಿದ್ದಾರೆ. ವಿಜಯೇಂದ್ರ ಮತ್ತು ಯತ್ನಾಳ್ ಟೀಂ ನಡುವೆ ಉಂಟಾಗಿರುವ ಸಂಘರ್ಷದ ಬಗ್ಗೆ ತರುಣ್ ಚುಗ್ ಮಾಹಿತಿ ಪಡೆದುಕೊಳ್ಳುತ್ತಾರೆ.
ಇಂದು ಇಡೀ ದಿನ ಬಿಜೆಪಿ ಕಚೇರಿಯಲ್ಲಿ ಸರಣಿ ಸಭೆಗಳ ನಡೆಸಲಿರುವ ಚುಗ್.ಶಾಸಕರ ಸಭೆ, ಪ್ರಮುಖರ ಸಭೆ, ವಿಶೇಷ ಕೋರ್ ಕಮಿಟಿ ಸಭೆಗಳನ್ನು ನಡೆಸಲಿರುವ ಚುಗ್. ಇಂದಿನ ಸಭೆಯಲ್ಲಿ ಬಳಿಕ ಹೈಕಮಾಂಡ್ ಗೆ ರಾಜ್ಯ ಬಿಜೆಪಿ ವಿದ್ಯಮಾನಗಳ ಕುರಿತು ತರುಣ್ ಚುಗ್ ರಿಪೋರ್ಟ್ ಸಲ್ಲಿಸಲಿದ್ದಾರೆ.
ಒಟ್ಟಾರೆ ಒಂದು ಕಡೆ ಯತ್ನಾಳ್ ಗೆ ಬಿಜೆಪಿ ಹೈಕಮಾಂಡ್ ನೋಟಿಸ್ ನೀಡಿದೆ ಇನ್ನೊಂದು ಕಡೆ ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವ ಗೊಂದಲಗಳ ಬಗ್ಗೆ ಪರಿಶೀಲಿಸಿ ರಿಪೋರ್ಟ್ ಕೊಡಲು ಬಿಜೆಪಿ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರನ್ನ ರಾಜ್ಯಕ್ಕೆ ಕಳುಹಿಸಿದೆ.ಈ ಎಲ್ಲಾ ಸರ್ಕಸ್ ಗಳ ಬಳಿಕವಾದ್ರು ಬಿಜೆಪಿಯಲ್ಲಿ ಉಲ್ಪಣಗೊಂಡಿರುವ ಬಣ ರಾಜಕೀಯಕ್ಕೆ ಬ್ರೇಕ್ ಬೀಳುತ್ತಾ ಕಾದುನೋಡಬೇಕು.
PublicNext
03/12/2024 10:09 am