ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಇನ್ನೂ ಗೊಂದಲ ನಿವಾರಣೆಯಾಗಿಲ್ಲ ಅದ್ರಲ್ಲೂ ಯತ್ನಾಳ್ ಗೆ ಶೋಕಾಸ್ ನೋಟಿಸ್ ಬಳಿಕ ರಾಜ್ಯ ಬಿಜೆಪಿಯಲ್ಲಿ ಒಂದಿಷ್ಟು ಬೆಳವಣಿಗೆಗಳು ನಡೆಯುತ್ತಿವೆ ಇಂದು ಕೇಂದ್ರ ಬಿಜೆಪಿಯ ಶಿಸ್ತು ಸಮಿತಿ ಎದರು ಯತ್ನಾಳ್ ನೋಟಿಸ್ ಗೆ ಉತ್ತರ ಕೊಡಲಿದ್ದಾರೆ. ಹಾಗೇ ಯತ್ನಾಳ್ ಅಂಡ್ ಟೀಂ ಎಲ್ಲಾ ದೆಹಲಿಯಲ್ಲಿ ತಂಗಿದ್ದಾರೆ.
ಈ ನಡುವೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ದೆಹಲಿಗೆ ತುರ್ತು ದೌಡಾಯಿಸಿದ್ದಾರೆ. ಇಂದು ಬೆಳಗ್ಗಿನ ವಿಮಾನದಲ್ಲೇ ದೆಹಲಿಗೆ ಪ್ರಯಾಣಿಸಿದ್ದಾರೆ ಅಶೋಕ್. ದೆಹಲಿಯಲ್ಲಿಂದು ಒಂದು ಕಡೆ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಭೇಟಿ ಮಾಡ್ತಿರೋ ಯತ್ನಾಳ್ ಇನ್ನೊಂದು ಕಡೆ ಯತ್ನಾಳ್ ಪರವಾಗಿ ಅಥವಾ ಉಚ್ಚಾಟನೆ ತಪ್ಪಿಸಲು ಒಂದು ಬಣದಿಂದ(ಹಿರಿಯರು) ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.
ನಿನ್ನೆ ಬೆಂಗಳೂರಿನಲ್ಲೂ ತರುಣ್ ಚುಗ್ ಕೋರ್ ಕಮಿಟಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ರು. ಅಲ್ಲದೇ ದೆಹಲಿಯಲ್ಲೀ ಜೋಷಿ ನಿವಾಸದಲ್ಲಿ ರಾತ್ರಿ ಡಿನ್ನರ್ ಸಭೆ ನಡೆದಿತ್ತು. ಈ ಬೆನ್ನಲ್ಲೇ ಆರ್ ಅಶೋಕ್ ದೆಹಲಿ ಭೇಟಿ ಕುತೂಹಲ ಮೂಡಿಸಿದೆ.
PublicNext
04/12/2024 11:33 am