ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಭೀಮಗಡ ಅಭಯಾರಣ್ಯದಲ್ಲಿನ ಹಳ್ಳಿಗರ ಗೋಳು ಕೇಳುವವರ್ಯಾರು...? ಮುಖ್ಯಮಂತ್ರಿಗಳೇ ಇತ್ತ ಗಮನ ಹರಿಸುವಿರಾ?

ಖಾನಾಪುರ : ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಭೀಮಗಡ ಅಭಯಾರಣ್ಯದಲ್ಲಿ ಬರುವ ಗವಾಳಿ ಪಾಸ್ಟೋಲಿ ಕೊಂಗ್ರಾಳ್ಳಿ ಮುಂತಾದ ಹಳ್ಳಿಗಳ ಜನರ ಗೋಳು ನೋಡಲು ಜೈ ಜವಾನ್ ಜೈ ಕಿಸಾನ್ ಸಂಘಟನೆಯ ಗೋವಿಂದ ಪಾಟೀಲ ಹಾಗೂ ನೇಗಿಲು ಯೋಗಿ ರೈತ ಸೇವಾ ಸಂಘದ ರವಿ ಪಾಟೀಲ ಇವರುಗಳೊಂದಿಗೆ ನಮ್ಮ ವಾಹಿನಿಯು ಪ್ರಯಾಣ ಬೆಳೆಸಿತು.

ಇಲ್ಲಿನ ಜನರು ಸ್ವಾತಂತ್ರ್ಯ ಪೂರ್ವದಿಂದ ವಾಸ ಮಾಡುತ್ತಿದ್ದಾರೆ. ಎಲ್ಲರೂ ಮತ ಚಲಾಯಿಸುತ್ತಾರೆ. ಕರ್ನಾಟಕ ರಾಜ್ಯದ ಅಧಿಕೃತ ವಾಸಿಗಳಾಗಿದ್ದಾರೆ. ಆದರೆ ಇಲ್ಲಿಯವರೆಗೆ ಇವರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಆದಿವಾಸಿಗಳಂತೆ ವಾಸಿಸುತ್ತಿದ್ದಾರೆ.

ಕಸ್ತೂರಿ ರಂಗನ್ ವರದಿ ಪ್ರಕಾರ ಖಾನಾಪೂರ ತಾಲೂಕಿನ ಅರಣ್ಯದಲ್ಲಿ ಇರುವ ಸುಮಾರು 64 ಹಳ್ಳಿಗಳು ಸ್ಥಳಾಂತರ ಆಗಬೇಕು ಆದರೆ ಸರ್ಕಾರ ಇವರಿಗೆ ಸೂಕ್ತ ಪರಿಹಾರ ಕೊಡದೆ ಅಲ್ಪ ಮಟ್ಟದ ಪರಿಹಾರ ಕೊಟ್ಟು ಸ್ಥಳಾಂತರಿಸುವ ಹುನ್ನಾರ ನಡೆಸಿ ಇಲ್ಲಿಯವರೆಗೆ ಮೂಲಭೂತ ಸೌಕರ್ಯಗಳನ್ನ ನೀಡದೆ ವಂಚಿಸುತ್ತಾ ಬಂದಿದೆ.

ಇದರಲ್ಲಿ ಸುಮಾರು 10 ರಿಂದ 15 ಹಳ್ಳಿಗಳಲ್ಲಂತೂ ರಸ್ತೆಯಲ್ಲಿ ನೀರಿಲ್ಲ. ವಿದ್ಯುತ್ ಇಲ್ಲ… ಶಿಕ್ಷಣದ ವ್ಯವಸ್ಥೆಯಿಲ್ಲ, ಕುಟುಂಬ ನಿರ್ವಹಣೆಗೆ ಅಗತ್ಯ ಸಾಮಗ್ರಿಗಳನ್ನ ತರಬೇಕೆಂದರೆ ಸುಮಾರು 15 ರಿಂದ 20 ಕಿಲೋ ಮೀಟರ್ ನಡೆದುಕೊಂಡು ಬರಬೇಕು. ಮಧ್ಯದಲ್ಲಿ ಮಹಾದಾಯಿ ಮತ್ತು ಕಳಸಾ ಬಂಡೂರಿ ನದಿ ದಾಟಿ ಬರಬೇಕು. ನದಿಗೆ ಸರಿಯಾದ ಸೇತುವೆ ಕೂಡ ಇಲ್ಲ. ಮಳೆಗಾಲದಲ್ಲಂತೂ ಆರಾರು ತಿಂಗಳ ಇವರು ನಾಪತ್ತೆಯಾದಂತೆ ಇರುತ್ತಾರೆ.

ಆರೋಗ್ಯ ಸಮಸ್ಯೆಯಾದರೆ 15 ರಿಂದ 20 ಕಿಲೋ ಮೀಟರ್ ವರೆಗೆ ಹೊತ್ತುಕೊಂಡು ಬಂದು ಚಿಕಿತ್ಸೆ ಪಡೆಯಬೇಕು. ಇಲ್ಲಿಯವರೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಎಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಡಿಸೆಂಬರ್ 9 ರಂದು ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ಗೋವಿಂದ ಪಾಟೀಲ ಹಾಗೂ ರವಿ ಪಾಟೀಲ ಅವರು ನ್ಯಾಯಕ್ಕಾಗಿ ಜನರನ್ನು ಜಾಗೃತಗೊಳಿಸುವ ದಿಟ್ಟ ನಿರ್ಧಾರ ಕೈಗೊಂಡು ಸೂಕ್ತ ಪರಿಹಾರ ಕೊಟ್ಟು ಸ್ಥಳಾಂತರಿಸಿ ಇಲ್ಲವಾದರೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಹೋರಾಟ ಮಾಡಲು ಮುಂದಾಗಿದ್ದಾರೆ

ನಾಗೇಶ್ ನಾಯ್ಕರ್, ಪಬ್ಲಿಕ್ ನೆಕ್ಸ್ಟ್, ಖಾನಾಪುರ

Edited By : Somashekar
PublicNext

PublicNext

03/12/2024 05:56 pm

Cinque Terre

17.27 K

Cinque Terre

0

ಸಂಬಂಧಿತ ಸುದ್ದಿ