ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಶೂಟೌಟ್‌ ಪ್ರಕರಣ - ಕೇವಲ 24 ಗಂಟೆಯಲ್ಲೆ ಆರೋಪಿ ವಶಕ್ಕೆ, ಕಂಟ್ರಿ ಗನ್, ಬುಲೆಟ್ ಸೀಜ್

ಬೆಳಗಾವಿ: ಬೆಳಗಾವಿಯಲ್ಲಿ ನಡೆದ ಶುಟ್ ಔಟ್ ಪ್ರಕರಣದಿಂದ ಇಡಿ ಬೆಳಗಾವಿ ಜನರು ಬೆಚ್ಚಿಬಿದ್ದಿದ್ದರು, ಬಳಿಕ ಕೇವಲ 24 ಗಂಟೆಯಲ್ಲೆ ಆರೋಪಿಗನನ್ನು ವಶಕ್ಕೆ ಪಡೆದಿರುವ ಪೊಲೀಸರು ಕೃತ್ಯಕ್ಕೆ ಬಳಸಿದ ಗನ್, ಬುಲೆಟ್, ಮೋಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ನ. 27 ರಂದು ಮಧ್ಯಾಹ್ನ ಬೆಳಗಾವಿಯ ಆಂಜನೇಯ ನಗರದಲ್ಲಿ ವಾಸವಿದ್ದ ಸ್ಮಿತಾ ಗಜಾನನ ಸಡೇಕರವರ ಮನೆಗೆ ಪ್ರಣಿತ ಹೋಗಿದ್ದ, ಪ್ರಣಿತ ತನ್ನ ಹಳೆಯ ಸ್ನೇಹಿತೆ ನಿಧಾಳ ನೆನಪು ಮಾಡಿಕೊಂಡು ಅಳುತ್ತಿದ್ದಾಗ

ಇದರ ಬಗ್ಗೆ ಮಾತನಾಡುವ ಸಲುವಾಗಿ ಸ್ಮೀತಾ, ನಿಧಾ ಕಿತ್ತೂರಳನ್ನ ಸಾಯಂಕಾಲ 7-50 ಗಂಟೆಯ ಸುಮಾರಿಗೆ ಫೋನ್ ಮಾಡಿ ತನ್ನ ಮನೆಗೆ ಕರೆಯಿಸಿಕೊಂಡಿದ್ದಾಳೆ.

ಬಳಿಕ ರಾತ್ರಿ ನಿಧಾಳ ಸಂಬಂಧಿ ಹಾಗೂ ಸ್ನೇಹಿತರಾದ ಇನ್ನುಳಿದ ಮೂರು ಜನರು ಆರೋಪಿಗಳನ್ನು ಸ್ಮಿತಾ ಕರೆಸಿಕೊಳ್ಳುತ್ತಾಳೆ. ಆಗ ಮಾತಿಗೆ ಮಾತು ಬೆಳೆದು ಪ್ರಣಿತ ಮೇಲೆ ಹಲ್ಲೆ ಮಾಡಿ, ಕಂಟ್ರಿ ಬಂದುಕಿನಿಂದ ಫೈರಿಂಗ್ ಮಾಡಲಾಗಿತ್ತು. ಈ ಘಟನೆ ಸಂಬಂಧ ಮಾಳಮಾರುತಿ ಪೊಲೀಸರು ತನಿಖೆ ಕೈಕೊಂಡಿದ್ದರು.

ಯುವಕನ ಮೇಲೆ ಗುಂಡಿನ ದಾಳಿ ನಡೆಸಿದ್ದ ಒಟ್ಟು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿಲಾಗಿದೆ.‌ ಕೊಲೆ ಮಾಡಲು ಪ್ರಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹಾಗೂ ಅವರು ನೀಡಿದ ಮಾಹಿತಿಯ ಪ್ರಕಾರ ಮತ್ತೇ ಮೂರು ಆರೋಪಿಗಳನ್ನು ಬಂಧಿಸಲಾಗಿದೆ. ಹಾಗೂ ಬಂಧಿತರಿಂದ ನಾಡ ಪಿಸ್ತುಲನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

Edited By : Vinayak Patil
PublicNext

PublicNext

04/12/2024 12:11 pm

Cinque Terre

15.81 K

Cinque Terre

0

ಸಂಬಂಧಿತ ಸುದ್ದಿ