ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : 50ಲಕ್ಷ ಇನ್ಸೂರೆನ್ಸ್ ಹಣಕ್ಕಾಗಿ ತಮ್ಮನಿಂದಲೇ ಅಣ್ಣನ ಕೊಲೆ

ಬೆಳಗಾವಿ : ಅಣ್ಣ ತಮ್ಮಂದಿರ ವೈಮನಸ್ಸು ಸಾವಿನಲ್ಲಿ ಕೊನೆಯಾಗೋದು ಇತ್ತೀಚೆಗೆ ತುಂಬಾ ಕಾಮನ್ ಆಗಿದೆ. 50 ಲಕ್ಷ ಇನ್ಸೂರೆನ್ಸ್ ಹಣಕ್ಕಾಗಿ ಒಡಹುಟ್ಟಿದ ಅಣ್ಣನನ್ನೇ ತಮ್ಮ ಕೊಲೆಗೈದಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ ಬಳಿ ನಡೆದಿದ್ದ ಘಟನೆ ತನಿಖೆ ಮುಕ್ತಾಯವಾಗಿದೆ. ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹನುಮಂತ ಗೋಪಾಲ ತಳವಾರ(35) ಕೊಲೆಯಾಗಿದ ದುರ್ದೈವಿ ಎಂದು ಗೊತ್ತಾಗಿದೆ.

ಬಸವರಾಜ ತಳವಾರ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಅಣ್ಣನ ಹತ್ಯೆಗೈದ ಪಾಪಿಯಾಗಿದ್ದಾನೆ. ಹನುಮಂತನ ಹೆಸರಲ್ಲಿ 50 ಲಕ್ಷ ಇಂಶುರೆನ್ಸ್ ಮಾಡಿಸಿದ್ದ ಬಸವರಾಜ್‌, ಇಂಶುರೆನ್ಸ್ ನಾಮಿನಿ ಕೂಡ ಆಗಿದ್ದನು. ಅಣ್ಣ ಸತ್ತರೆ ತನಗೆ ಲಾಭ ಎಂದು ಭಾವಿಸಿ ಚಟ್ಟಕಟ್ಟಿದ್ದಾನೆ.

ಕಂಠಪೂರ್ತಿ ಕುಡಿಸಿ ತನ್ನ ಸ್ನೇಹಿತರೊಂದಿಗೆ ಅಣ್ಣನನ್ನು ಕರೆದೊಯ್ದಿದ್ದ ಸಹೋದರನೆ ಅಣ್ಣನ ಹತ್ಯೆ ಮಾಡಿದ್ದಾನೆ. ಶ್ರೀಗಂಧದ ಕಟ್ಟಿಗೆಗಳಿವೆ ಅದನ್ನು ತರಲು ಹೋಗೋಣ ಬಾ ಎಂದು ಕರೆದುಕೊಂಡು ಹೋಗಿದ್ದ ಚಾಲಾಕಿ ತಮ್ಮ ಹನುಮಂತನ ತಲೆಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಮೃತನ ಸಹೋದರ ಬಸವರಾಜ್ ತಳವಾರ, ಬಾಪು ಶೇಖ್, ಈರಪ್ಪ ಹಡಗಿನಾಳ, ಸಚಿನ್ ಕಂಟೆನ್ನವರ್ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಘಟಪ್ರಭಾ ಠಾಣೆಯ ಪೋಲೀಸರು ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ.

Edited By : Nagesh Gaonkar
PublicNext

PublicNext

04/12/2024 04:02 pm

Cinque Terre

11.27 K

Cinque Terre

0

ಸಂಬಂಧಿತ ಸುದ್ದಿ