ಬೆಳಗಾವಿ: ಎಣ್ಣೆ ಕುಡದ ಮೇಲೆ ಯಾರು ಎನ್ ಮಾಡ್ತಾರೆ ಹೇಳುವುದು ಕಷ್ಟ, ಅದರಂತೆ ಇಲ್ಲೊಬ್ಬ ಮಹಾಶಯ ಪೊಲೀಸ್ ಠಾಣೆ ಮುಂದೆಯೇ ಕುಳಿತು ಎಣ್ಣೆ ಹೊಡೆದಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.
ಎಣ್ಣೆ ಸ್ನ್ಯಾಕ್ಸ್ ಜೊತೆ ಬಂದ ಮದ್ಯಪ್ರಿಯ ನಡು ರಸ್ತೆಯಲ್ಲಿಯೇ ಕುಳಿತು ಮದ್ಯ ಸೇವಿಸಿದ್ದಾನೆ. ಈ ಘಟನೆ ಗೋಕಾಕ ಶಹರ ಪೊಲೀಸ್ ಠಾಣೆಯ ಮುಂದೆ ನಡೆದಿದೆ. ಪೊಲೀಸ್ ಠಾಣೆಯ ಮುಂದೆ ಜನರಿದ್ದರೂ ಡೊಂಟ್ ಕೇರ್ ಎಂದಿದ್ದಾನೆ. ಜನ ಓಡಾಡುತ್ತಿದ್ದರೂ ಸಹ ತನ್ನಷ್ಟಕ್ಕೆ ತಾನು ಕುಳಿತು ಮದ್ಯ ಕುಡಿದು ಕಿಕ್ ಏರಿಸಿಕೊಂಡಿದ್ದಾನೆ.
ಗೋಕಾಕ್ ಶಹರ ಪೊಲೀಸ್ ಠಾಣೆ ಎದುರು ಇರುವ ರಸ್ತೆ ಮೇಲೆ ಮದ್ಯ ಸೇವಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜನ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
PublicNext
04/12/2024 10:46 am