ಬೈಲಹೊಂಗಲ : ತಾಲೂಕಿನ ಜಾಲಿಕೊಪ್ಪ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಗಾಣಿಗೇರ ಅವರು ವಿವಿಧ ಜಾತಿಯ ಹಾವುಗಳ ರಕ್ಷಣೆ ಮಾಡುತ್ತ, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುತ್ತ ಅನೇಕ ಸಮಾಜ ಕಾರ್ಯ ಮಾಡುತ್ತ ತಾಲೂಕಿನ ಜನರ ಆಪತ್ಕಾಲದ ಆಪತ್ಬಾಂಧವ ಎನಿಸಿದ್ದಾರೆ.
ಅವಿವಾಹಿತರಾಗಿರುವ 36 ವಯಸ್ಸಿನ ಮಲ್ಲಿಕಾರ್ಜುನ ಗಾಣಿಗೇರ ಅವರು ಕಳೆದ 20 ವರ್ಷಗಳಿಂದ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಎಲ್ಲದಕ್ಕೂ ಅವರು ಉಚಿತ ಸೇವೆ. ಹಾವುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಬೈಲಹೊಂಗಲ, ಬೆಳಗಾವಿ, ಧಾರವಾಡ, ಸುತ್ತಮುತ್ತ ಇದುವರೆಗೂ ಸುಮಾರು 20 ಸಾವಿರಕ್ಕೂ ಹೆಚ್ಚು ವಿವಿಧ ಜಾತಿಯ ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಅದರ ಜೊತೆ ಬಿಡುವು ಇರುವಾಗ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಹಾವುಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಎರಡು ಬಾರಿ ನಾಗರಹಾವಿನಿಂದ ಕಚ್ಚಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೆದ್ದಾರಿಯಲ್ಲಿ ಎಲ್ಲೇ ಅಪಘಾತವಾದರೂ ಕ್ಷಣಾರ್ಧಲ್ಲಿ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಾರೆ. ಗ್ರಾಮದಲ್ಲಿ ಬಡವರಿಗೆ ಆರೋಗ್ಯದಲ್ಲಿ ಏರುಪೇರಾದರೆ, ಯಾರಾದದರೂ ಆಪರೇಷನ್ ಮಾಡುವುದು ಇದ್ದರೆ ಸ್ವತ ಹುಬ್ಬಳ್ಳಿ ಕೆ ಎಂ ಸಿ, ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಕೊಡಿಸುತ್ತಾರೆ.
ಇನ್ನು ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆಗೆ ಮಲ್ಲಿಕಾರ್ಜುನ ಅವರಿಗೂ ಅವಿನಾಭವ ಸಂಬಂಧ. ಸಮೀಪದ ಮಲಪ್ರಭಾ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಶವಗಳನ್ನು ತೆಗೆಯುತ್ತಾರೆ.ಯಾರು ಇಲ್ಲದ ಎಷ್ಟೋ ಅನಾಥ ಶವಗಳಿಗೆ ಮುಕ್ತಿ ಕೊಟ್ಟಿದ್ದಾರೆ.
ಮಲ್ಲಿಕಾರ್ಜುನ ಗಾಣಿಗೇರ ಮೊ. 99008 30632
ಶರೀಫ ನದಾಫ ಬೈಲಹೊಂಗಲ
PublicNext
02/12/2024 07:51 am