ಕುಂದಗೋಳ : ನಮಸ್ಕಾರಿ ರೀ ಕುಂದಗೋಳ ಮಂದಿ .. ಕುಂದಗೋಳ ಸಾರಿಗೆ ಬಸ್ ನಿಲ್ದಾಣದ ಮುಂದೆ ಇರೋ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬದ ಅಕ್ಕ ಪಕ್ಕ ಓಡಾಡೋ ಜನ ಹುಷಾರ್ ನೋಡ್ರಿ.
ಯಾಕಂದ್ರ ? ವಿದ್ಯುತ್ ಶಾಕ್ ತಗುಲಿ ಇವತ್ತ್ ಶ್ವಾನಯೊಂದು ಆಗ ಜಾಗದಾಗ್ ಸತ್ತ್ ಬಿದೈತಿ, ವಿದ್ಯುತ್ ಶಾಕ್ ತಗುಲಿ ಮೃತಪಟ್ಪ ಶ್ವಾನವನ್ನು ನೋಡಿದ ಜನ ಹೆಸ್ಕಾಂ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಪೋನ್ ಮಾಡಿ ಹೇಳದ್ ಮ್ಯಾಲ್ ಹೆಸ್ಕಾಂ ಸಿಬ್ಬಂದಿಗಳು ಓಡ್ಹೋಡಿ ಬಂದು ವಿದ್ಯುತ್ ಕಂಬದ ಪವರ್ ಸಪ್ಲ್ಯಾ ಬಂದ್ ಮಾಡ್ಯಾರ್.
ಆದ್ರ್ ! ಪಾಪಾ ಕಂಬದ ಬಳಿ ಹೋಗಿದ್ದ ಶ್ವಾನ ಪ್ರಾಣ ಬಿಟೈತಿ. ಅಲ್ರೀ, ಪಾಪಾ ಶ್ವಾನ ಬಿಟ್ಟು ಮನಶ್ಯಾರ್ ಕಂಬದ ಬಳಿ ಹೋಗಿದ್ರ್ ಅವ್ರ ಕಥಿ ಅವ್ರು ಕುಟುಂಬದ ಕಥಿ ಏನ್ರೀ ಸಾಹೇಬ್ರ ?
ದಯವಿಟ್ಟು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಊರಾಗ್ ಹಿಂಗ್ ಕರೆಂಟ್ ಶಾಕ್ ಹೊಡಿಯೋ ಕಂಬ ಯಾವ್ಯಾವ ಅದಾವು ಸ್ವಲ್ಪ ನೋಡ್ರಿ ಪಾ ... ಸರಿ ಮಾಡ್ರೀ !
ಆ ಮ್ಯಾಲ್ ನೋಡ್ರಿ ಸತ್ತ್ ಶ್ವಾನ ಹಿಂಗ್ ಕಸದ ಗಾಡ್ಯಾಗ್ ಹಾಕ್ಕೊಂಡು ತಗೋಂಡ ಹೋದ್ರ್.
Kshetra Samachara
03/12/2024 03:40 pm