ಕುಂದಗೋಳ : ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಹೊರಟ ಬೈಕ್ ಸವಾರನೋರ್ವ ಬೈಕ್ ನಿಯಂತ್ರಣ ಮಾಡಲಾಗದೆ ರಸ್ತೆ ಪಕ್ಕದ ವಿದ್ಯುತ್ ಕಂಬಗಳಿಗೆ ಡಿಕ್ಕಿ ಪಡಿಸಿ ಸಾವನ್ನಪ್ಪಿದ ಘಟನೆ ಚಾಕಲಬ್ಬಿ ಸಂಶಿ ಮಾರ್ಗ ಮಧ್ಯೆ ನಡೆದಿದೆ.
ಹೌದು ! ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದ ಮಂಜುನಾಥ ನರೇಗಲ್ ಎಂಬ ಯುವಕನೇ ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ವೇಗ ನಿಯಂತ್ರಣ ಮಾಡಲಾಗದೆ ರಸ್ತೆ ಪಕ್ಕದ ವಿದ್ಯುತ್ ಕಂಬಗಳಿಗೆ ಡಿಕ್ಕಿಪಡಿಸಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಈ ಘಟನೆ ನ.23 ರಂದು ನಡೆದಿದ್ದು, ಬೈಕ್ ಹಿಂಬದಿ ಸವಾರ ಸಂಜಯ ಹೊಸಮನಿ ಇತನಿಗೂ ಗಾಯ
ಪಡಿಸಿದ್ದಾನೆ.
ಅಪಘಾತದಲ್ಲಿ ಬೈಕ್ ಸಂಪೂರ್ಣ ಜಖಂ ಆಗಿದ್ದು, ಪ್ರಕರಣದ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
26/11/2024 12:57 pm