ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಶಾಲಾ ವಿದ್ಯಾರ್ಥಿ ಮೇಲೆ ಕೋತಿ ದಾಳಿ, ಗಂಭೀರ ಗಾಯ

ಧಾರವಾಡ: ಶಾಲಾ ವಿದ್ಯಾರ್ಥಿಯೊಬ್ಬನ ಮೇಲೆ ಕೋತಿ ದಾಳಿ ನಡೆಸಿದ ಪರಿಣಾಮ ವಿದ್ಯಾರ್ಥಿ ಗಾಯಗೊಂಡಿರುವ ಘಟನೆ ಧಾರವಾಡದ ಮದಾರಮಡ್ಡಿ ಸಂಭವಿಸಿದೆ.

ಬೆಳಿಗ್ಗೆ ಶಾಲೆಗೆಂದು ಹೋಗಿದ್ದ ಮದಾರಮಡ್ಡಿಯ ವಿದ್ಯಾರ್ಥಿ ಮೇಲೆ ಕೆಂಪು ಕೋತಿ ದಾಳಿ ನಡೆಸಿದೆ. ಕಳೆದ ಕೆಲ ದಿನಗಳಿಂದ ಆ ಭಾಗದಲ್ಲಿ ಈ ಕೆಂಪು ಕೋತಿ ಹಾವಳಿ ನಡೆಸುತ್ತಿದೆ. ಶಾಲಾ ಮಕ್ಕಳನ್ನು ನೋಡಿ ಅವರ ಮೇಲೆ ದಾಳಿ ಮಾಡುತ್ತಿದೆ.

ಇಂದು ಕೂಡ ಮದಾರಮಡ್ಡಿಯ ವಿದ್ಯಾರ್ಥಿ ಮೇಲೆ ಈ ಕೋತಿ ದಾಳಿ ನಡೆಸಿದ ಪರಿಣಾಮ ವಿದ್ಯಾರ್ಥಿ ಕಾಲಿಗೆ ಗಾಯವಾಗಿದೆ. ಗಾಯಗೊಂಡ ವಿದ್ಯಾರ್ಥಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಕೋತಿ ಹಾವಳಿಯಿಂದ ಮದಾರಮಡ್ಡಿಯ ಅಂಗನವಾಡಿ ಮತ್ತು 1ನೇ ತರಗತಿ ಶಾಲಾ ಮಕ್ಕಳಿಗೆ ರಜೆ ನೀಡಿ ಮನೆಗೆ ಕಳುಹಿಸಲಾಗಿದೆ. ಈ ಘಟನೆ ಸಂಬಂಧ ಸ್ಥಳೀಯರು ಮಹಾನಗರ ಪಾಲಿಕೆಗೆ ದೂರು ಸಹ ನೀಡಿದ್ದಾರೆ.

Edited By : Suman K
Kshetra Samachara

Kshetra Samachara

03/12/2024 02:57 pm

Cinque Terre

21.5 K

Cinque Terre

2

ಸಂಬಂಧಿತ ಸುದ್ದಿ