ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ರಾಜಕೀಯದಲ್ಲಿ ಏಕವಚನ ಪ್ರಯೋಗ ಬೇಸರ ವ್ಯಕ್ತಪಡಿಸಿದ ಬರಗೂರು

ಧಾರವಾಡ: ಪ್ರಸ್ತುತ ರಾಜಕಾರಣದಲ್ಲಿ ಏಕವಚನ ಪದ ಬಳಕೆಯಾಗುತ್ತಿರುವುದಕ್ಕೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಧರೆಗೆ ದೊಡ್ಡವರು ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ರಾಜಕೀಯದಲ್ಲಿ ಪಾಳಕೆಗಾರಿಕೆಯ ಮಾತುಗಾರಿಕೆ ನಡೆಯುತ್ತಿದೆ. ಪಾಳೆಗಾರಿಕೆಯ ಪ್ರಜಾಪ್ರಭುತ್ವ ನಡೆದಿದೆ. ಏಕವಚನದಲ್ಲೇ ಮಾತನಾಡುವವರು ಪ್ರಜೆಗಳನ್ನು ಪ್ರತಿನಿಧಿಸುವ ಪ್ರತಿನಿಧಿಗಳಾ? ಇವರಿಗೆ ಪ್ರಜಾಸತಾತ್ಮಕ ಪರಿಭಾಷೆಯೇ ಇಲ್ಲ.

ಹೀಗಾದರೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿ ಏನು ಪ್ರಯೋಜನ? ಚುನಾವಣೆಯಲ್ಲಿ ಸೈದ್ಧಾಂತಿಕವಾದ ನುಡಿ ಎಲ್ಲಿಯೂ ಇಲ್ಲ. ಸಮಯ ಸಾಧಕರು ಹೆಚ್ಚಾಗಿದ್ದಾರೆ. ಆಡುವ ಮಾತಿನಲ್ಲಿ ಸಭ್ಯತೆ ಇಲ್ಲ, ಗೌರವ ಇಲ್ಲ. ಅಸಭ್ಯವಾದ ಮಾತುಗಳನ್ನು ಆಡುತ್ತಿದ್ದಾರೆ. ರಾಜಕೀಯ ಕ್ಷೇತ್ರ ನುಡಿ ನೈತಿಕತೆ ಉಳಿಸಿಕೊಂಡಿಲ್ಲ. ಬೈಗುಳ ಟೀಕೆ ಅಲ್ಲ. ಟೀಕೆ ಬೇರೆ ಬೈಗುಳ ಹೆಚ್ಚಾಗಿದೆ.

ಈಗ ಮೈ ಬಣ್ಣದ ಕುರಿತು ಮಾತನಾಡುತ್ತಿದ್ದಾರೆ. ಮೈ ಬಣ್ಣದ ಕುರಿತು ಮಾತನಾಡುವುದು ಸಭ್ಯತೆಯಾ? ಇಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಜಮೀರ್ ಅಹ್ಮದ್ ಅವರು ಎಚ್‌ಡಿಕೆಗೆ ಕರಿಯ ಎಂಬ ಮಾತನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/12/2024 03:36 pm

Cinque Terre

35.81 K

Cinque Terre

0

ಸಂಬಂಧಿತ ಸುದ್ದಿ