ಹುಬ್ಬಳ್ಳಿ: ಹುಬ್ಬಳ್ಳಿಯ ಅಂಬಿಕಾ ನಗರದಲ್ಲಿ ಲಾರಿ ಚಾಲಕನೊಬ್ಬ ಕುಡಿದ ಮತ್ತಿನಲ್ಲಿ ಲಾರಿ ಚಲಾಯಿಸಿ ಮೂರು ಕಾರುಗಳಿಗೆ ಅಪಘಾತ ಮಾಡಿ ಪರಾರಿಯಾದ ಘಟನೆ ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಗಷ್ಟೇ ನಡೆದಿದೆ.
ಕ್ಯಾಂಟರ್ ವಾಹನದಲ್ಲಿ ಮಿನಿ ಹಿಟ್ಯಾಚಿ ಸಾಗಿಸುತ್ತಿದ್ದ ಲಾರಿ ಚಾಲಕ ಕುಡಿದ ಮತ್ತಿನಲ್ಲಿ ನಿಯಂತ್ರಣ ತಪ್ಪಿ ಮನೆ ಮುಂದೆ ನಿಂತಿದ್ದ ಇನ್ನೋವಾ, ಸ್ವಿಫ್ಟ್, ಹಾಗೂ ಬ್ರೀಜಾ ಕಾರಿಗೆ ಡಿಕ್ಕಿ ಹೊಡೆದು ಲಾರಿ ಬಿಟ್ಟು ಪರಾರಿಯಾಗಿದ್ದಾನೆ.
ಸದ್ಯ ಅಂಬಿಕಾ ನಗರದಲ್ಲಿ ನಡೆಯಬಹುದಾಗಿದ್ದ ದೊಡ್ಡ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದ್ದು. ಘಟನಾ ಸ್ಥಳಕ್ಕೆ ಹುಬ್ಬಳ್ಳಿಯ ಉತ್ತರ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/11/2024 10:58 pm