ಹುಬ್ಬಳ್ಳಿ: ಚಿಗರಿ ಬಸ್ಸೊಂದು ಎಮ್ಮೆಗೆ ಡಿಕ್ಕಿಹೊಡೆದ ಪರಿಣಾಮ ಎಮ್ಮೆಯ ಕೋಡು ಮುರಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೈರಿದೇವರಕೊಪ್ಪದ ಬಳಿಯಲ್ಲಿ ನಡೆದಿದೆ.
ಧಾರವಾಡದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಚಿಗರಿ ಅಡ್ಡಬಡ್ಡ ಎಮ್ಮೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎಮ್ಮೆ ಸ್ಥಳದಲ್ಲಿಯೇ ನಿತ್ರಾಣಗೊಂಡಿದೆ. ಬಳಿಕ ಸ್ಥಳೀಯ ಜನರು ಹಾಗೂ ರೈತರು ರಸ್ತೆಯನ್ನು ಬಂದ್ ಮಾಡಿ ಬಿಆರ್‌ಟಿಎಸ್ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರಕ್ಕೆ ಅಡೆತಡೆ ಉಂಟಾಯಿತು.ಈ ವೇಳೆ ಡಿಸಿಪಿ ರವೀಶ್ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Kshetra Samachara
24/11/2024 07:53 pm