ಕುಂದಗೋಳ : ಲಕ್ಷ್ಮೇಶ್ವರ ಬಸ್ ಘಟಕದಿಂದ ರಾಮಗೇರಿ, ಪಶುಪತಿಹಾಳ, ಸಂಶಿ, ಶಿರೂರ, ಕುಂದಗೋಳ, ಗುಡೇನಕಟ್ಟಿ, ನಾಗರಹಳ್ಳಿ, ಮಂಟೂರ ಬಂಡಿವಾಡ ಕ್ರಾಸ್ ಮಾರ್ಗವಾಗಿ ಹುಬ್ಬಳ್ಳಿಗೆ ಸಾರಿಗೆ ಸಂಸ್ಥೆಯ ಲಕ್ಷ್ಮೇಶ್ವರ ಘಟಕದಿಂದ ದಿನನಿತ್ಯ ಬೆಳಿಗ್ಗೆ ಮತ್ತು ಮಧ್ಯಾಹ್ನ ಸಾಯಂಕಾಲ ಈ ಮಾರ್ಗವಾಗಿ ಬಸ್ ಸಂಚಾರ ಒದಗಿಸಿ ಕೊಡಬೇಕೆಂದು ಲಕ್ಷ್ಮೇಶ್ವರ ಘಟಕದ ವ್ಯವಸ್ಥಾಪಕರಾದ ಕವಿತಾ ಹಾಲೋಡಿ ಅವರಿಗೆ ವಿವಿಧ ಗ್ರಾಮಗಳ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಮನವಿಯಲ್ಲಿ ಮೇಲಿನ ಈ ಮಾರ್ಗವಾಗಿ ಬಸ್ ಸಂಚಾರ ಆರಂಭವಾದರೇ ಪ್ರಯಾಣಿಕರಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದು ವಿವರಿಸಿದ್ದಾರೆ.
ಈಗಾಗಲೇ ಸಂಬಂಧಪಟ್ಟ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಈ ಮಾರ್ಗವಾಗಿ ಬಸ್ ವ್ಯವಸ್ಥೆ ಮಾಡುವಂತೆ ಮನವಿ ಸಲ್ಲಿಸಿದ ವಿಷಯವನ್ನು ಅಧಿಕಾರಿಗಳು ಗಮನಕ್ಕೆ ತರಲಾಯಿತು, ಶೀಘ್ರದಲ್ಲೇ ಈ ಮಾರ್ಗವಾಗಿ ಬಸ್ ಸಂಚಾರ ಆರಂಭಿಸುವುದಾಗಿ ವ್ಯವಸ್ಥಾಪಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಚನ್ನಬಸಪ್ಪ ಸಿದ್ದೂನವರ, ಭೀಮಪ್ಪ ಪೂಜಾರ, ಬಸವರಾಜ ಯೋಗಪ್ಪನವರ, ರಾಜು ಮಲ್ಲಿಗವಾಡ, ಸುಧೀರಗೌಡ ಪಾಟೀಲ, ಬಸಪ್ಪ ಜೀರಿಗೆ ದಾವಲಸಾಬ ಜಾತಿಗೆ, ವರ್ದಮಾನ್ ಯೋಗಪ್ಪನವರ ಮತ್ತು ಮಂಟೂರ ಬಂಡಿವಾಡ, ನಾಗರಹಳ್ಳಿ ಗುಡೇನಕಟ್ಟಿ, ಕುಂದಗೋಳ ಗ್ರಾಮದ ಗ್ರಾಮಸ್ಥರುಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Kshetra Samachara
03/12/2024 10:50 am