ಯಲ್ಲಾಪುರ : ತಾಲೂಕಿನ ಬೊಮಡಿಕೊಪ್ಪ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ ಯಲ್ಲಾಪುರ ಪಿಎಸ್ಸೈ ಶೇಡಜಿ ಚಹ್ವಾಣ ಹಾಗೂ ಪೊಲೀಸ್ ಸಿಬ್ಬಂದಿ ಗಾಂಜಾ ಮಾರಾಟ ಮಾಡುತ್ತಿದ್ದ, ಆರೋಪಿ ಹಳಿಯಾಳ ತಾಲೂಕಿನ ಅಂಬಿಕಾನಗರದ ಕೇಗದಾಳದ ಕೂಲಿ ಕೆಲಸದ ಜೋಸೆಫ್ ತಂದೆ ಪ್ರಾನ್ಸೀಸ್ ಸಿದ್ದಿ ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ 249.4 ಗ್ರಾಂ. ಗಾಂಜಾ ಹಾಗೂ ಗಾಂಜಾ ಮಾರಾಟದಿಂದ ಸಂಗ್ರಹಿಸಿದ 300 ರೂ.ಗಳನ್ನು ಜಪ್ತಿಪಡಿಸಿಕೊಂಡ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Kshetra Samachara
03/12/2024 10:04 am