ಕಾರವಾರ: ಜಿಲ್ಲಾ ಪಂಚಾಯಿತಿಯಿಂದ ನಿರ್ಮಿಸಲಾದ ಜಿಲ್ಲೆಯ ಸಿದ್ಧಿ ಸಮುದಾಯದ ಡಮಾಮಿ ಪ್ರವಾಸೋದ್ಯಮ ಯೋಜನೆಗೆ ನವದೆಹಲಿಯ ಪಿಎಚ್‌ಡಿ ಚೆಂಬರ್ ಆಪ್ ಕಾಮರ್ಸನಲ್ಲಿ ನಡೆದ ಸಮಾರಂಭದಲ್ಲಿ ಸ್ಕೋಚ್ ಪ್ರಶಸ್ತಿ ದೊರಕಿದೆ.
ಜಿಲ್ಲೆಯು ಸಂಪೂರ್ಣವಾಗಿ ಅರಣ್ಯ ಪ್ರದೇಶಗಳಿಂದ ಕೂಡಿದ್ದು ಪರಿಸರ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಉತ್ತಮ ಅವಕಾಶಗಳಿದೆ. ಈ ನಿಟ್ಟಿನಲ್ಲಿ ಎನ್.ಆರ್.ಎಂ.ಲ್ ಯೋಜನೆಯಡಿ ಬರುವ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಸಮುದಾಯ ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಜೀವನೋಪಾಯ ಚಟುವಟಿಕೆಯನ್ನು ಕಲ್ಪಿಸುವ ಉದ್ದೇಶದಿಂದ ಈ ವಿನೂತನ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿಯ ಸಿಇಒ ಈಶ್ವರ ಕುಮಾರ ಕಾಂದೂ ತಿಳಿಸಿದ್ದಾರೆ.
Kshetra Samachara
03/12/2024 07:24 pm