ಹಳಿಯಾಳ : ಬಲೂನಿಗೆ ಬಾಯಿಂದ ಗಾಳಿ ತುಂಬುವ ಸಂದರ್ಭದಲ್ಲಿ ಉಲ್ಟಾ ಹೊಡೆದ ಬಲೂನ್ ನೇರವಾಗಿ ಬಾಲಕನ ಗಂಟಲಿನಲ್ಲಿ ಸಿಲುಕಿ ಬಾಲಕನೋರ್ವ ಸಾವನ್ನಪ್ಪಿದ ಘಟನೆ ಜೋಗನಕೊಪ್ಪ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ನವೀನ ನಾರಾಯಣ ಬೆಳಗಾಂವಕರ(13) ಎಂಬಾತನೆ ಸಾವಿಗಿಡಾದ ಬಾಲಕ.
ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕ. ಗಂಟಲಲ್ಲಿ ಬಲೂಕು ಸಿಕ್ಕಿಕೊಂಡ ಹಿನ್ನೆಲೆ ಶ್ವಾಸ ತೆಗೆದುಕೊಳ್ಳಲಾಗದೆ ಬಾಲಕ ಸ್ಥಳದಲ್ಲಿ ಬಿದ್ದು ಒದ್ದಾಡುತ್ತಿದ್ದನ್ನು ಕಂಡ ಮನೆಯವರು ಬಲೂನ್ ತೆಗೆಯಲು ಹರಸಾಹಸ ಪಟ್ಟಿದ್ದಾರೆ. ಆದರೆ ಅದಾಗಲೆ ನೇರವಾಗಿ ಗಂಟಲಿಲ್ಲಿ ಭದ್ರವಾಗಿ ಸಿಕ್ಕಿ ಹಾಕಿಕೊಂಡ ಬಲೂನ್ ಮೂಗು ಹಾಗೂ ಬಾಯಿಂದಲೂ ಶ್ವಾಸ ತೆಗೆದುಕೊಳ್ಳಲಾಗದ ಹಾಗೆ ಬ್ಲಾಕ್ ಮಾಡಿ ಬಾಲಕನ ಸಾವಾಗಿದೆ.
ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಿದಾಗ ವೈದ್ಯರು ತಪಾಸಣೆ ನಡೆಸಿ ಬಾಲಕ ಮೃತಪಟ್ಟಿರುವ ಬಗ್ಗೆ ಖಚಿತ ಪಡಿಸಿದ್ದಾರೆ. ಸ್ಥಳಕ್ಕೆ ಹಳಿಯಾಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
02/12/2024 11:59 am