ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ: 'ಯುವ ಪೀಳಿಗೆಗೆ ಕನ್ನಡಾಭಿಮಾನ ಕಡಿಮೆಯಾಗುತ್ತಿದೆ' - ನ್ಯಾಯಾಧೀಶೆ ಸಿ ರೇಣುಕಾಂಬ

ಸಿದ್ದಾಪುರ: ನಮ್ಮ ಕನ್ನಡಕ್ಕೆ ಪುರಾತನವಾದ ಇತಿಹಾಸವಿದೆ. ಆದರೆ ಇಂದು ಯುವ ಪೀಳಿಗೆಗೆ ಕನ್ನಡಾಭಿಮಾನ ಕಡಿಮೆಯಾಗುತ್ತಿದೆ. ನಾವು ಹೆಚ್ಚು ಕನ್ನಡವನ್ನು ಬಳಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಸ್ವಚ್ಚ ಕನ್ನಡವನ್ನು ನೀಡಲು ಸಾಧ್ಯ ಎಂದು ಮಡಿಕೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ನ್ಯಾಯಾಧೀಶೆ ಸಿ ರೇಣುಕಾಂಬ ಹೇಳಿದರು.

ತಾಲ್ಲೂಕಿನ ಭುವನಾಗಿರಿಯ ಭುವನೇಶ್ವರಿ ದೇವಾಲಯದಲ್ಲಿ ಕದಂಬ ಸೈನ್ಯದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು. ಶಿಕ್ಷಣ ಮತ್ತು ವೃತ್ತಿ ಜೀವನದಲ್ಲಿ ಕನ್ನಡಕ್ಕೆ ಆದ್ಯತೆ ನೀಡುತ್ತಾ ಇಂದಿಗೂ ನ್ಯಾಯಲಯದಲ್ಲಿ ಕನ್ನಡದಲ್ಲೇ ಆದೇಶ ನೀಡುತ್ತಿದ್ದೇನೆ ಎಂದರು.

ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Edited By : PublicNext Desk
Kshetra Samachara

Kshetra Samachara

30/11/2024 05:45 pm

Cinque Terre

6.52 K

Cinque Terre

0

ಸಂಬಂಧಿತ ಸುದ್ದಿ