ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊನ್ನಾವರ: ಅಣ್ಣ-ತಮ್ಮಂದಿರ ಜಗಳ ಕೊಲೆಯಲ್ಲಿ ಅಂತ್ಯ

ಹೊನ್ನಾವರ: ತಾಲೂಕಿನ ಗುಂಡಿಬೈಲ್ ಹೆಬೈಲ್‌ನಲ್ಲಿ ಮಂಗಳವಾರ ರಾತ್ರಿ ಒಡಹುಟ್ಟಿದ ಅಣ್ಣನೇ ತಮ್ಮನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಸುಬ್ರಾಯ್ ಹನುಮಂತ ನಾಯ್ಕ ಇತ ತಮ್ಮ ಸಹೋದರನಾದ ನಾಗೇಶ್ ಹನುಮಂತ ನಾಯ್ಕ ಇವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಕಳೆದ ನಾಲೈದು ತಿಂಗಳ ಹಿಂದೆ ಇಬ್ಬರ ನಡುವೆ ಜಗಳ ಉಂಟಾಗಿ ತಮ್ಮ ನಾಗೇಶ್ ತನ್ನ ಅಣ್ಣ ಸುಬ್ರಾಯನ ಮೇಲೆ ಹಲ್ಲೆ ಮಾಡಿ ಆತನ ಕಾಲು ಮುರಿದ್ದು ಹಾಕಿದ್ದ ಎನ್ನಲಾಗಿದೆ. ಮಂಗಳವಾರ ಊಟ ಮಾಡುವ ಸಮಯದಲ್ಲಿ ತಮ್ಮ ನಾಗೇಶ ಅಣ್ಣನಿಗೆ ಖಾಸಗಿ ವಿಚಾರವಾಗಿ ಚುಡಾಯಿಸಿದ್ದ ಎನ್ನಲಾಗಿದೆ. ಇದಕ್ಕೆ ಸಿಟ್ಟಾದ ಅಣ್ಣ ಮಂಜುನಾಥ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಪೊಲೀಸರು ಪರಿಶೀಲನೆ‌ ನಡೆಸಿದ್ದು ತನಿಖೆಯ ಬಳಿಕ‌ ನಿಜಾಂಶ ಹೊರಬರಬೇಕಿದೆ.

Edited By : PublicNext Desk
Kshetra Samachara

Kshetra Samachara

04/12/2024 11:03 am

Cinque Terre

3.74 K

Cinque Terre

0

ಸಂಬಂಧಿತ ಸುದ್ದಿ