ಅಂಕೋಲಾ: ತಾಲೂಕಿನ ಅವರ್ಸಾದ ಅಜ್ಜಪ್ಪ ಶೇಟವಾಡಾ ವ್ಯಾಪ್ತಿಯ ಕಿರು ಸೇತುವೆಯೊಂದಕ್ಕೆ ಯುವಕನೋರ್ವ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ಅವರ್ಸಾದ ರಾಜೇಶ ಕೃಷ್ಣ ಗಾಂವಕರ ( 20 ) ಮೃತ ಯುವಕ. ಈತನು ಮೂಡಕಟ್ಟಾ – ಹಾರವಾಡ ವ್ಯಾಪ್ತಿಯ ಕಿರು ಸೇತುವೆಗೆ ಹಗ್ಗ ಕಟ್ಟಿ ,ಕುತ್ತಿಗೆಗೆ ನೇಣು ಬಿಗಿದುಕೊಂಡು ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಬೆಳಿಗ್ಗೆ ಅದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಪೊಲೀಸ್ ತನಿಖೆಯ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ.
Kshetra Samachara
02/12/2024 08:18 pm