ಕುಂದಗೋಳ : ಪಬ್ಲಿಕ್ ನೆಕ್ಸ್ಟ್ ನಮ್ಮೂರು ನಮ್ಮ ಕೆರೆ ವಿಶೇಷ ವರದಿಯಲ್ಲಿ ಕುಂದಗೋಳ ಪಟ್ಟಣದ ತೋರಣಗಟ್ಟಿ ಕೆರೆ ಅವ್ಯವಸ್ಥೆಯನ್ನು ತೆರೆದಿಟ್ಟಿತ್ತು.
ತೋರಣಗಟ್ಟಿ ಕೆರೆ ಸಂಪೂರ್ಣ ಕಲುಷಿತ ನೀರು ಮತ್ತು ಅನೈರ್ಮಲ್ಯ ತುಂಬಿ ಪ್ಲಾಸ್ಟಿಕ್, ಬಾಟಲ್, ಕಟ್ಟಡದ ತ್ಯಾಜ್ಯ ಸೇರಿ ಎಲ್ಲೇಡೆ ದುರ್ನಾತ ಸೊಳ್ಳೆಗಳ ಕಾಟದ ಬಗ್ಗೆ ಸ್ಥಳೀಯರ ಅಭಿಪ್ರಾಯ ಪಡೆದು ವರದಿ ಮಾಡಿತ್ತು.
ಇದೀಗ ಈ ವರದಿ ಆಲಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತೋರಣಗಟ್ಟಿ ಕೆರೆ ಅವ್ಯವಸ್ಥೆಯನ್ನು ಸರಿಪಡಿಸಿ ಸ್ವಚ್ಛತೆ ಕೈಗೊಳ್ಳುತ್ತೇವೆ ಕೆರೆ ಒತ್ತುವರಿ ಸಂಬಂಧಪಟ್ಟಂತೆ ಕೆರೆ ಯಾರ ಸ್ವಾಮ್ಯಕ್ಕೆ ಒಳಪಟ್ಟಿದೆ ಎಂದು ಪರಿಶೀಲನೆ ನಡೆಸುತ್ತೇವೆ ಎಂದಿದ್ದಾರೆ.
ಸದ್ಯ ತೋರಣಗಟ್ಟಿ ಕೆರೆ ಸ್ವಚ್ಛತೆಗೆ ಅಧಿಕಾರಿಗಳು 1 ತಿಂಗಳು ಅವಧಿ ನೀಡಿದ್ದು, ಪಬ್ಲಿಕ್ ನೆಕ್ಸ್ಟ್ ನಮ್ಮೂರು ನಮ್ಮ ಕೆರೆ ವಿಶೇಷ ವರದಿ ಫಲವಾಗಿ ಸ್ವಚ್ಛತೆ ಕಾಣುತ್ತಾ ? ಅಧಿಕಾರಿಗಳು ಹಳೆ ವರಸೆ ಮುಂದುವರೆಯುತ್ತಾ ? ಕಾದು ನೋಡಬೇಕಿದೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/12/2024 05:04 pm