ಧಾರವಾಡ: ಸಿನಿಮಾಗಳು ಪ್ರಬಲ ಮಾಧ್ಯಮ. ಆದರೆ, ಈಗ ಮನಸ್ಸು ಮುಟ್ಟುವ ಸಿನಿಮಾಗಳು ಬರುತ್ತಿಲ್ಲ. ಮೈ ಮುಟ್ಟುವ ಸಿನಿಮಾಗಳು ಬರುತ್ತಿವೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಧರೆಗೆ ದೊಡ್ಡವರು ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವೆಲ್ಲ ಮನಸ್ಸು ಮುಟ್ಟುವ ಮಾಡುವ ಸಿನಿಮಾ ಮಾಡಿ ಎನ್ನುತ್ತೇವೆ. ಆದರೆ, ಮೈ ಮುಟ್ಟುವ ಸಿನಿಮಾ ಮಾಡುತ್ತಿದ್ದಾರೆ. ಸಾಹಿತ್ಯ ಮತ್ತು ಸಿನಿಮಾ ಸಮಾಜಮುಖಿಯಾಗಿರಬೇಕು. ಆಗ ಮಾತ್ರ ಒಂದಿಷ್ಟು ಬದಲಾವಣೆ ಸಾಧ್ಯ ಎಂದರು.
ರಾಜ್ಯದಲ್ಲಿ ನೀರಾವರಿ ಬಗ್ಗೆ ಚರ್ಚೆ ನಡೆಯುತ್ತಿದೆ. ನೀರು ಇಲ್ಲದಿರುವ ಕೆರೆಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ನೀರಿಲ್ಲದ ಕಡೆ ನೀರು ಹಾಯಿಸುವುದೇ ನಿಜವಾದ ನೀರಾವರಿ. ಆದರೆ, ಈಗ ನೀರು ತುಂಬಿದ ಕೆರೆಗಳ ಮೇಲೆ ನೀರಾವರಿ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾವೇರಿ ವಿವಾದ ಆದರೆ ಎರಡು ಸಿಂಹಾಸನಗಳು ಅಲುಗಾಡುತ್ತವೆ.
ಒಂದು ಕರ್ನಾಟಕದಲ್ಲಿ ಇನ್ನೊಂದು ಚೆನ್ನೈನಲ್ಲಿ ಸಿಂಹಾಸನ ಅಲುಗಾಡುತ್ತದೆ. ಆ ನದಿಗೆ ಈಗ ರಾಜಕೀಯ ಶಕ್ತಿ ಬಂದಿದೆ. ಎಲ್ಲ ಪ್ರದೇಶದ ಅಭಿವೃದ್ಧಿಗೆ ಬದ್ಧತೆ ಬೇಕಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಬದ್ಧತೆ ತೋರಿಸಬೇಕಿದೆ ಎಂದರು.
Kshetra Samachara
02/12/2024 04:33 pm