ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೆ.22 ರಂದು ಸಕ್ಕರೆ ಕಾಯಿಲೆಗೆ ಉಚಿತ ಚಿಕಿತ್ಸೆ : ಬನ್ನಿ ಭಾಗವಹಿಸಿ..!

ಹುಬ್ಬಳ್ಳಿ : ಮಧುಮೇಹವನ್ನು ಸಂಪೂರ್ಣವಾಗಿ ಯಾವುದೇ ಔಷಧಿಯಿಲ್ಲದೇ ಗುಣಮುಖರಾಗಿ ಮಾಡಬಹುದಾಗಿದೆ. ಈ ದಿಸೆಯಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಇದಾರಾ-ಎ-ಖಿದ್ಮತ-ಎ-ಖಲ್ಕ್ ವತಿಯಿಂದ ಸೆಪ್ಟೆಂಬರ್ 22 ರಂದು ಬೆಳಿಗ್ಗೆ 10 ರಿಂದ ಕೇಶ್ವಾಪುರ ಶಾಂತಿನಗರದಲ್ಲಿನ ಗುಲ್-ಮೊಹರ್ ಅಪಾರ್ಟ್ಮೆಂಟ್ ನಲ್ಲಿ ಒಂದು ದಿನದ ಸಕ್ಕರೆ ಕಾಯಿಲೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಮೌಲಾನಾ ಅಬ್ದುಲ್ ರಜಾಕ್ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನುಷ್ಯನನ್ನು ಹೆಚ್ಚು ಬಾಧಿಸುವ ಕಾಯಿಲೆಗಳಲ್ಲಿ ಮಧುಮೇಹ ಕೂಡ ಒಂದು. ಮಧುಮೇಹವನ್ನು ಸಕ್ಕರೆ ಕಾಯಿಲೆ ಎಂದು ಕರೆಯಲಾಗುತ್ತದೆ. ಒಮ್ಮೆ ಈ ಕಾಯಿಲೆ ಆರಂಭವಾದರೆ ಜೀವನಪರ್ಯಂತ ಔಷಧ ತೆಗೆದುಕೊಳ್ಳಲೇಬೇಕೆಂದು ಹೇಳಲಾಗುತ್ತದೆ. ಇರಿಸಲು ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಈ ದಿಸೆಯಲ್ಲಿ ಉಚಿತ ಮಧುಮೇಹಕ್ಕೆ ಚಿಕಿತ್ಸೆ ನೀಡಲಾಗುವುದು ಎಂದರು.

2003ರಲ್ಲಿ ಸ್ಥಾಪಿತವಾಗಿರುವ ಇದಾರಾ-ಎ-ಖಿದ್ಮತ-ಎ-ಖಲ್ಕ್ ಸಂಸ್ಥೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಅದರಂತೆ ಇದೀಗ ಉಚಿತ ಸಕ್ಕರೆ ಕಾಯಿಲೆ ಶಿಬಿರವನ್ನು ಆಯೋಜಿಸಲಾಗಿದೆ.

ಇನ್ನು ಧರ್ಮಗುರುಗಳಾದ ಪೀರ್ ಸೈಯದ್ ಅಹ್ಮದ್ ರಜಾ ಸರಖಾಜಿ ಕುಟುಂಬ ಮೂರು ತಲೆಮಾರಿನಿಂದ ಸಕ್ಕರೆ ಕಾಯಿಲೆಗೆ ಔಷಧಿ ನೀಡಿ ಗುಣಪಡಿಸುತ್ತಿದೆ.

ಈಗಾಗಲೇ ಲಕ್ಷಾಂತರ ಜನರು ಇವರಿಂದ ಔಷಧಿ ಪಡೆದು ಗುಣಮುಖರಾಗಿದ್ದಾರೆ. ಇವರ ಬಳಿ ಗೋವಾ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ದೇಶದ ನಾನಾ ಭಾಗಗಳಿಂದ ಜನರು ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಹುಬ್ಬಳ್ಳಿ ಸೇರಿದಂತೆ ಸುತ್ತಮುತ್ತಲಿನ ಜನರ ಅನುಕೂಲವಾಗುವಂತೆ ಪೀರ್ ಸೈಯದ್ ಅಹ್ಮದ್ ರಜಾ ಸರಖಾಜಿ ಅವರಿಂದ ಸಕ್ಕರೆ ಕಾಯಿಲೆಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ನೂರಾರು ಜನರು ನೊಂದಣಿ ಮಾಡಿಕೊಂಡಿದ್ದಾರೆ. ಅಂದು ಸಾವಿರಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448317277, 8618121003 ಗೆ ಸಂಪರ್ಕಿಸಬಹುದು.

Edited By : Nirmala Aralikatti
Kshetra Samachara

Kshetra Samachara

19/09/2024 12:25 pm

Cinque Terre

5.79 K

Cinque Terre

0

ಸಂಬಂಧಿತ ಸುದ್ದಿ