ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅವಳಿನಗರಗಳ ಮಧ್ಯೆ ಲಘು ರೈಲು ಓಡಿಸಲು ಪ್ಲ್ಯಾನ್: ಚಿಗರಿ ಬಸ್‌ಗೆ ಸಿಗುತ್ತಾ ಕೋಕ್?

ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರಗಳ ಮಧ್ಯೆ ಕಳೆದ 6 ವರ್ಷಗಳ ಹಿಂದೆ ಆರಂಭವಾಗಿದ್ದ ಬಿಆರ್‌ಟಿಎಸ್ ಯೋಜನೆಯ ಚಿಗರಿ ಬಸ್ ವ್ಯವಸ್ಥೆ ಧಾರವಾಡ-ಹುಬ್ಬಳ್ಳಿ ಜನರಿಗೆ ಅನುಕೂಲಕ್ಕಿಂತ ಅನಾನೂಕೂಲ‌ ಸೃಷ್ಟಿಸಿದ್ದೇ ಹೆಚ್ಚು. ಈ ಯೋಜನೆಯ ಅವ್ಯವಸ್ಥೆ ವಿರುದ್ಧ ಅನೇಕ ಆಕ್ರೋಶಗಳು, ಪ್ರತಿಭಟನೆಗಳು ಇದ್ದಾಗಲೂ ನಿತ್ಯ ಸಾವಿರಾರು ಜನ ಅವಳಿ ನಗರದ ಮಧ್ಯೆ ಓಡಾಡಲು ಬಳಸೋದು ಮಾತ್ರ ಚಿಗರಿ ಬಸ್‌ನ್ನೇ.

ಈ ಬಿಆರ್‌ಟಿಎಸ್‌ನಿಂದ ಅವಳಿ ನಗರದ ಸಂಚಾರ ದಟ್ಟಣೆ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ಈಗ ಈ ಚಿಗರಿ ಬಸ್ ಸೇವೆ ಸ್ಥಗಿತಗೊಳಿಸಿ ಲಘು ರೈಲು ಸೇವೆ ನೀಡುವ ಯೋಜನೆಗೆ ಪ್ಲ್ಯಾನ್ ನಡೆದಿದೆ. ಇದಕ್ಕೆ ಸಂಬಂಧಿಸಿದ ಹಿಸ್ಸ್(HESS) ಎಂಬ ಕಂಪೆನಿಯು ಯೋಜನೆಯನ್ನು ಜಾರಿಗೆ ತರಲು ಮುಂದೆ ಬಂದಿದೆ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ ಅಡಿಯಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, ಹಿಸ್ಸ್ ಸಂಸ್ಥೆ ಧಾರವಾಡಕ್ಕೆ ಆಗಮಿಸಿ ಮೊದಲ ಪ್ರಾಜೆಕ್ಟ್ ಪ್ರೆಜೆಂಟೇಷನ್ ತೋರಿಸಿದೆ. ಇದನ್ನು ಆಧರಿಸಿ ಇನ್ನೊಂದು ಸುತ್ತಿನ ಸಮಾಲೋಚನೆಗಳನ್ನು ನಡೆಸಿ ಕೊನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.

ಬೈಟ್ 1: ಸಂತೋಷ ಲಾಡ್, ಸಚಿವ

ಬಿಆರ್‌ಟಿಎಸ್‌ನ ಚಿಗರಿ ಬಸ್‌ಗಾಗಿ‌ ಹೆಚ್ಚಿನ ರಸ್ತೆಯೂ ಬಳಕೆಯಾಗುತ್ತಿದೆ. ಅವಳಿ ನಗರದ ಮಧ್ಯೆ ಶೇ.20ರಷ್ಟು ಇರುವ ಚಿಗರಿ ಬಸ್‌ಗಳಿಗೆ ಶೇ.80 ರಷ್ಟು ರಸ್ತೆ ಬಳಕೆಯಾದರೆ, ಉಳಿದೆಲ್ಲ ಶೇ.80 ರಷ್ಟು ವಾಹನಗಳು ಶೇ.20 ರಷ್ಟು ಮಾತ್ರ ಸೀಮಿತವಿರುವ ರಸ್ತೆಯಲ್ಲಿ ಓಡಾಡಬೇಕು. ಹೀಗಾಗಿ ಅನೇಕ ಅಪಘಾತಗಳು ಆಗುತ್ತಲೇ ಇರುತ್ತವೆ. ಆದ್ದರಿಂದ ಲೈಟ್ ರೈಲ್ ಟ್ರಾನ್ಸಿಸ್ಟ್ ಯೋಜನೆಯ ಅಡಿಯಲ್ಲಿ ಈಗಿರುವ ಬಿಆರ್‌ಟಿಎಸ್ ಕಾರಿಡಾರಿನಲ್ಲೇ ರೈಲು ಓಡಿಸುವ ಯೋಜನೆ ಇದೆಯಂತೆ. ಸದ್ಯ ನಡೆದ ಮೊದಲ ಸಭೆಯಲ್ಲಿಯೇ ಹೊಸ ರೈಲು ಮಾರ್ಗದ ಸಾಧಕ ಬಾಧಕಕ್ಕಿಂತ ಬಿಆರ್‌ಟಿಎಸ್ ಅವ್ಯವಸ್ಥೆ ಬಗ್ಗೆಯೇ ಜನರಿಂದ ಹೆಚ್ಚು ಆಕ್ರೋಶಗಳು ಕೇಳಿ ಬಂದವು. ಅಲ್ಲದೇ ಇದೆಲ್ಲ ಮಾಡುವ ಬದಲಿಗೆ ಧಾರವಾಡ ನಗರ ಹಾಗೂ ಹುಬ್ಬಳ್ಳಿ ನಗರ ಮಾರ್ಗದಲ್ಲಿ ಪ್ಲೈಓವರ್ ಮಾಡಿಕೊಡಿ ಎಂಬ ಆಗ್ರಹವೂ ಕೇಳಿ ಬಂದಿದೆ.

ಲಘು ರೈಲು ಸಂಚಾರದಿಂದ ಅವಳಿ ನಗರದ ದಟ್ಟಣೆ ಕಡಿಮೆಯಾಗುತ್ತೆ ಎನ್ನುವ ಕಾರಣ ಹೇಳಲಾಗುತ್ತಿದೆ. ಆದರೆ ಬಿಆರ್‌ಟಿಎಸ್ ಬರುವಾಗಲೂ ಇದೇ ಮಾತು ಹೇಳಲಾಗಿತ್ತು. ಹೀಗಾಗಿ ಹಿಂದಿನ ತಪ್ಪುಗಳು ಈ ಯೋಜನೆಯಲ್ಲಿ‌ ಮರುಕಳಿಸದಿರಲಿ ಅನ್ನೋದೇ ಜನರ ಆಗ್ರಹವಾಗಿದೆ.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/09/2024 03:02 pm

Cinque Terre

60.81 K

Cinque Terre

22

ಸಂಬಂಧಿತ ಸುದ್ದಿ