ಹುಬ್ಬಳ್ಳಿ: ಅಂದುಕೊಂಡಂತೆ ಆಗಿದ್ರೆ ಒಂದು ವಾರದ ಕೆಳಗೆ ಹಸೆಮಣೆ ಏರಬೇಕಿತ್ತು. ಕಳೆದ ತಿಂಗಳು ಆತನ ಮದುವೆ ಫಿಕ್ಸ್ ಆಗಿತ್ತು. ಇದೇ ಎರಡರಂದು ಆತನ ಮದುವೆ ಕೂಡಾ ನಡಿಬೇಕಿತ್ತು. ಆದ್ರೆ ವಿಧಿಯಾಟವೇ ಬೇರೆಯಾಗಿದೆ. ಹಸೆಮಣೆ ಏರಬೇಕಾದವನು,ಮಸಣ ಸೇರಿದ್ದಾನೆ. ಅಪಘಾತಕ್ಕೆ ಈಡಾದ 24 ವರ್ಷದ ಯುವಕನೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು, ಆತನ ಸಾವಿಗೆ ವೈದ್ಯರ ನಿರ್ಲಕ್ಷ್ಯದ ಆರೋಪವೂ ಕೇಳಿ ಬಂದಿದೆ. ಅಷ್ಟಕ್ಕೂ ಏನಿದು ಯುವಕನ ಅಪಘಾತದ ಮನಕಲಕುವ ಘಟನೆ ಅಂತೀರಾ ಈ ಸ್ಟೋರಿ ನೋಡಿ.
ಈ ಫೋಟೋದಲ್ಲಿ ಕಾಣೋ ಯುವಕನ ಹೆಸರು ವೆಂಕಟೇಶ್ ಮೋತಗಾರ. ವಯಸ್ಸು 24 ಹುಬ್ಬಳ್ಳಿಯ ಗಬ್ಬೂರ ನಿವಾಸಿ. ಅಂದುಕೊಂಡಂತೆ ಎಲ್ಲವೂ ಆಗಿದ್ರೆ ಆತ ಮದುವೆಯಾಗಿ ಒಂದು ವಾರ ಆಗಬೇಕಾಗಿತ್ತು. ಆದ್ರೆ ಆತ ಇಂದು ಮಸಣ ಸೇರಿದ್ದಾನೆ. ಎಸ್ ವೆಂಕಟೇಶ್ ಮೋತಗಾರ ಹುಬ್ಬಳ್ಳಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರೋ ಬಾಲಾಜಿ ಆಸ್ಪತ್ರೆಯಲ್ಲಿ ವೆಂಕಟೇಶ್ ಸಾವನ್ನಪ್ಪಿದ್ದಾನೆ.
ಇದಕ್ಕೆಲ್ಲ ಕಾರಣ ವೈದ್ಯರ ನಿರ್ಲಕ್ಷ್ಯ ಎನ್ನಲಾಗಿದೆ. ಕಳೆದ ವಾರ ವೆಂಕಟೇಶ್ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ.ಧಾರವಾಡ ಬಳಿ ಗಾಯಗೊಂಡಿದ್ದ ವೆಂಕಟೇಶ್ ನನ್ನ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ವೈದ್ಯರು ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದೆ ಎಂದಿದ್ರು. ಹಾಗಾಗಿ ಸಂಬಂಧಿಕರು ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಗೆ ಕಾಂಟಾಕ್ಟ್ ಮಾಡಿದ್ರು. ರಿಪೋರ್ಟ್ ನೋಡಿ ನಾವು ಚಿಕಿತ್ಸೆ ಕೊಟ್ಟು ಕಾಪಾಡತೀವಿ ಎಂದಿದ್ರು.ಆದ್ರೆ ಇಂದು ಏಕಾಏಕಿ ವೆಂಕಟೇಶ್ ಸಾವನ್ನಪ್ಪಿದ್ದಾನೆ.ಇದಕ್ಕೆಲ್ಲ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿದ್ರು.ಬಾಲಾಜಿ ಆಸ್ಪತ್ರೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಮುಂಜಾನೆವರೆಗೂ ವೆಂಕಟೇಶ್ ಚೆನ್ನಾಗಿದ್ದ. ಸುಮಾರು ಎರಡು ಲಕ್ಷ ಹಣವನ್ನು ಆಸ್ಪತ್ರೆಗೆ ಕಟ್ಟಿದ್ದಾರೆ.ಆದ್ರೂ ಬದುಕುಳಿಯಲಿಲ್ಲ. ಆಸ್ಪತ್ರೆ ವೈದ್ಯರು ಸರಿಯಾದ ಚಿಕಿತ್ಸೆ ನೀಡದೆ ಇರೋದಕ್ಕೆ ಸಂಬಂಧಿಕರು ಆಕ್ರೋಶಗೊಂಡು ಪ್ರತಿಭಟನೆ ಮಾಡಿದರು.ಕೇವಲ ನಾಲ್ಕು ದಿನದಲ್ಲಿ ಸುಮಾರು ಎರಡು ಲಕ್ಷ ಹಣ ಕಟ್ಟಿದ್ದಾರೆ. ಹುಬ್ಬಳ್ಳಿ ಕಿಮ್ಸ್ ನಿಂದ ಇದೇ ಮೂರರಂದು ಬಾಲಾಜಿ ಆಸ್ಪತ್ರೆಗೆ ವೆಂಕಟೇಶ್ ನನ್ಮ ಶಿಫ್ಟ್ ಮಾಡಲಾಗಿತ್ತು. ಇಷ್ಟು ದಿನ ಬದುಕ್ತಾನೆ ಎಂದು ವೈದ್ಯರು ಇಂದು ಏಕಾಏಕಿ ಸಾವನ್ನಪ್ಪಿದ್ದಾನೆ ಎಂದಿದ್ದಾರೆ. ಇದಕ್ಕೆಲ್ಲ ಬಾಲಾಜಿ ಆಸ್ಪತ್ರೆ ಸಿಬ್ಬಂದಿ ಕಾರಣ ಎಂದು ಆಕ್ರೋಶ ಹೊರಹಾಕಿದ್ರು.
ಒಟ್ಟಾರೆ ಹಸಮಣೆ ಇರಬೇಕಾದ ಯುವಕ ದುರಂತ ಅಂತ್ಯ ಕಂಡಿದ್ದಾನೆ.ವೈದ್ಯರ ನಿರ್ಲಕ್ಷ್ಯವೋ,ಆತನ ದುರ್ದೈವವೋ,ವಿಧಿ ಮಾತ್ರ ವೆಂಕಟೇಶ್ ಬಾಳಲ್ಲಿ ಯಾರೂ ಉಹಿಸದ ಆಟ ಅಡಿದೆ.
ವಿನಯ ರೆಡ್ಡಿ, ಕ್ರೈಂ ಬ್ಯುರೋ, ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/11/2024 04:35 pm