ಬೆಂಗಳೂರು: 1999ರಲ್ಲಿ ಆರಂಭಗೊಂಡ ಬೆಂಗಳೂರು ಮೂಲದ 'ಲೋಟಸ್ ಲ್ಯಾಬ್ಸ್ ಸಂಸ್ಥೆಯು ತನ್ನ ಎಲ್ಲ ಉದ್ಯೋಗಿಗಳನ್ನು ವಜಾ ಮಾಡಿದೆ.
'ಲೋಟಸ್ ಲ್ಯಾಬ್ಸ್' ಇಸ್ರೇಲ್ ಮೂಲದ ಟೆವಾ ಫಾರ್ಮಾಸ್ಯುಟಿಕಲ್ಸ್' ಸಂಸ್ಥೆಗೆ ಸ್ವಾಧೀನಗೊಂಡ ನಂತರ ಸಂಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬಂದಿವೆ. ವೈದ್ಯಕೀಯ ಸಂಶೋಧನೆ ಹಾಗೂ ಸೇವೆಗಳಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸುವಲ್ಲಿ ಸಂಸ್ಥೆ ಎಡವಿದೆ ಎನ್ನಲಾಗಿದೆ. ಈ ಕಾರಣಗಳಿಂದ ಸಂಸ್ಥೆಗೆ ಹಿನ್ನೆಡೆಯಾಗಿ ಸುಮಾರು 200 ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಈಗಾಗಲೇ ಕಂಪನಿಯು 61 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಕೊಟ್ಟಿದ್ದು ಉಳಿದ ಉದ್ಯೋಗಿಗಳಿಗೆ 2025 ಮಾರ್ಚ್ 25ರ ಗಡುವು ನೀಡಲಾಗಿದೆ.
'ಲೋಟಸ್ ಲ್ಯಾಬ್ಸ್ ಒಂದು ವೈದ್ಯಕೀಯ ಸಂಶೋಧನಾ ಸಂಸ್ಥೆಯಾಗಿದ್ದು 2,500 ಕ್ಲಿನಿಕಲ್ ಪ್ರಯೋಗ ಹಾಗೂ 2,800ಕ್ಕೂ ಹೆಚ್ಚು ಜೈವಿಕ ಅಧ್ಯಯನಗಳನ್ನು ನಡೆಸಿದ ದಾಖಲೆ ಹೊಂದಿದೆ. ಇದು ಉತ್ತಮ ಕಾರ್ಯಕ್ಷಮತೆ ಹಾಗೂ ವೃತ್ತಿಪರರಿಂದ ನಡೆಸಲ್ಪಟ್ಟ ಸಂಸ್ಥೆ ಎಂದು ಖ್ಯಾತಿ ಪಡೆದಿತ್ತು.
PublicNext
12/11/2024 02:54 pm