ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಿಯತಮೆಯ ಬಳಿ ನೂರು ರೂ ಕೇಳಿ ಪಡೆದಿದ್ದ ಸೈಫ್‌ ಇಂದು 1200 ಕೋಟಿಯ ಒಡೆಯ

ಬಾಲಿವುಡ್‌ ನ ೯೦ ರ ದಶಕದ ಜೋಡಿ ಸೈಫ್‌ ಹಾಗೂ ಅಮೃತಾ ಸಿಂಗ್‌ ಲವ್‌ ಸ್ಟೋರಿ ಎಲ್ಲರಿಗೂ ಗೊತ್ತಿರುವ ವಿಚಾರ. ಯೇ ದಿಲ್ಲಗಿ ಚಿತ್ರದ ಮೂಲಕ ಭೇಟಿಯಾದ ಇವರಿಬ್ಬರು ಮೊದಲ ಭೇಟಿಯಲ್ಲೇ ಲವ್‌ ಎಟ್‌ ಫಸ್ಟ್‌ ಸೈಟ್‌ ಆಗಿತ್ತು,ಸೈಫ್‌ ಆ ಸಮಯದಲ್ಲಿ ಅಷ್ಟೊಂದು ಶ್ರೀಮಂತನಾಗಿರಲಿಲ್ಲ, ಆದರೆ ಅಮೃತಾ ಕೈ ತುಂಬಾ ಪ್ರಾಜೆಕ್ಟ್‌ ಹಾಗೂ ಹಣವಿದ್ದ ಕಾಲವದು.ಸೈಫ್‌ ಒಂದು ದಿನ ಅಮೃತಾಳನ್ನು ಡೇಟಿಂಗ ಕರೆದಿದ್ದರಂತೆ ಆಗ ಅಮೃತಾ ತನ್ನ ಮನೆಗೆ ಊಟಕ್ಕೆ ಬರುವಂತೆ ಆಹ್ವಾನಿದ್ದು ನಂತರ ಅಲ್ಲೇ ಎರಡು ದಿನ ಬೀಡು ಬಿಟ್ಟಿದ್ದರಂತೆ ಸೈಫ್.‌ನಂತರ ಅಲ್ಲಿಂದ ಹೋಗುವಾಗ ಅಮೃತಾ ಬಳಿ ನೂರು ರೂ ಕೇಳಿ ಪಡೆದುಕೊಂಡಿದ್ದರು ಅನ್ನೋದು ವಿಚಿತ್ರ,ಅದೇ ವ್ಯಕ್ತಿ ಇಂದು 1200 ಕೋಟಿ ರೂಪಾಯಿ ಒಡೆಯ ಹಾಗೂ 5000 ಕೋಟಿ ಮೌಲ್ಯದ ಪೂರ್ವಿಕರ ಆಸ್ತಿ ಹೊಂದಿರುವ ಕುಬೇರ.

1991 ರಲ್ಲಿ ಇವರಿಬ್ಬರು ಮದುವೆಯಾಗಿ 2004 ರಲ್ಲಿ ಬೇರ್ಪಟಿದ್ದು ಇವರಿಗೆ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಇಬ್ಬರು ಮಕ್ಕಳು ಇದ್ದಾರೆ. 2012 ಮತ್ತೇ ಕರೀನಾ ಕಪೂರ್‌ ಅನ್ನು ಸೈಫ್‌ ಮದುವೆಯಾಗಿ ಇಬ್ಬರು ಗಂಡು ಮಕ್ಕಳು ಸೇರಿ ಒಟ್ಟು ನಾಲ್ಕು ಮಂದಿಯ ತಂದೆಯಾಗಿ ಸುಖವಾಗಿ ಜೀವನ ಮಾಡುತ್ತಿದ್ದಾರೆ.

Edited By : Somashekar
PublicNext

PublicNext

13/11/2024 07:52 pm

Cinque Terre

68.11 K

Cinque Terre

4