ಬಿಗ್ ಬಾಸ್ ಕನ್ನಡ 11 ಮನೆಯಲ್ಲಿ ಪ್ರತಿ ವಾರನು ಒಂದೊಂದು ಟಾಸ್ಕ್ಗಳನ್ನು ಬಿಗ್ ಬಾಸ್ ಕೊಡುತ್ತಾರೆ. ಹಾಗೆಯೇ ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಮಣ್ಣಿನ ಜೋಡಿಗಳಾಗಿ ಆಡುವ ಟಾಸ್ಕ್ ಅನ್ನು ನೀಡಿದ್ದಾರೆ. ಒಬ್ಬರು ಮಣ್ಣಿನಲ್ಲಿ ಮಾಡಿದ ಅಕ್ಷರವನ್ನು ಇನ್ನೊಬ್ಬ ಸ್ಪರ್ಧಿ ಹಾಳು ಮಾಡಬೇಕು. ಈ ರೀತಿಯ ಟಾಸ್ಕ್ ಅನ್ನು ಬಿಗ್ ಬಾಸ್ ಕೊಟ್ಟಿದ್ದರು.
ಅದರಲ್ಲಿ ಶಿಶಿರ್ ಹಾಗೂ ಚೈತ್ರಾ ಅವರು ಜೋಡಿಗಳಾಗಿ ಟಾಸ್ಕ್ ಆಡಿದ್ದು, ಮಣ್ಣಿನಲ್ಲಿ ಅಕ್ಷರ ಬರೆಯುವ ವೇಳೆ ಚೈತ್ರಾ ತನ್ನ ಅಸಡ್ಡೆಯಿಂದ
ಕೈಯಲ್ಲಿದ್ದ ಚಿನ್ನದ ಉಂಗುರವನ್ನು ಜಾರಿಸಿ ಕಳೆದುಕೊಂಡಿದ್ದಾರೆ.
ಚೈತ್ರಾ ಅವರು ಕಣ್ಣೀರಿಡುತ್ತಾ. ಅದು ತುಂಬಾ ಮಹತ್ವದ ಉಂಗುರ ದಯವಿಟ್ಟು ಹುಡುಕಿಕೊಡಿ ಬಿಗ್ ಬಾಸ್ ಎಂದು ಚೈತ್ರಾ ಕ್ಯಾಮರಾದ ಮುಂದೆ ಮನವಿ ಮಾಡಿಕೊಂಡಿದ್ರು, ಮನೆಮಂದಿಯೆಲ್ಲಾ ಅರ್ಧದಲ್ಲಿಯೇ ಟಾಸ್ಕ್ ಬ್ರೇಕ್ ಮಾಡಿ ಉಂಗುರವನ್ನು ಹುಡುಕಲು ಶುರು ಮಾಡಿದ್ರೂ ಉಂಗುರ ಯಾರಿಗೂ ಸಿಕ್ಕಿರಲಿಲ್ಲ,
ತುಳುನಾಡಿನಲ್ಲಿ ದೈವ ಕಾರ್ಣಿಕವಂತು ಇಡೀ ಪ್ರಪಂಚಕ್ಕೆ ಗೊತ್ತು, ಹಾಗೆಯೇ ನಂಬಿದ ಭಕ್ತರನ್ನು ಯಾವತ್ತು ಅಜ್ಜ ಕೈ ಬಿಡೋದಿಲ್ಲ ಅನ್ನೋದನ್ನು ಬಿಗ್ ಬಾಸ್ ಮನೆಯಲ್ಲಿಯು ನಿಜ ಮಾಡಿದ್ದಾರೆ. ಉಂಗುರ ಸಿಗದೆ ಇದ್ದಾಗ ಚೈತ್ರಾ ಅವರು ಮನಸ್ಸಿನಲ್ಲಿ ಕೊರಗಜ್ಜ ದೈವದ ಬಳಿ ಉಂಗುರ ಸಿಗಬೇಕೆಂದು ಪ್ರಾರ್ಥಿಸಿದ್ದರಂತೆ.
ಇದಾದ ಕೆಲವೇ ಸಮಯದಲ್ಲಿ ಕಳೆದು ಹೋದ ಉಂಗುರವನ್ನು ತ್ರಿವಿಕ್ರಮ್ ಅವರ ಕೈಗೆ ಬಿಗ್ ಬಾಸ್ ನೀಡಿದ್ದಾರೆ. ಕೊನೆಗೆ ಉಂಗುರ ಸಿಕ್ಕಿದ ನಂತರ ಚೈತ್ರಾ ಕೊರಗಜ್ಜ ದೈವದ ಹೆಸರು ಹೇಳಿ ಕುಣಿದು ಕುಪ್ಪಳಿಸಿದ್ದು ಉಂಗುರ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
PublicNext
14/11/2024 05:04 pm