ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಿರುಪತಿ: ತಿಮ್ಮಪ್ಪ ಸನ್ನಿಧಿಗೆ ಗಂಡಭೇರುಂಡ ಸಹಿತ ಕೋಟಿ ಬೆಲೆಯ ವಜ್ರದ ಹಾರ ಕೊಡುಗೆ ನೀಡಿದ ಬೆಂಗಳೂರು ಉದ್ಯಮಿ

ತಿರುಪತಿ: ಲಡ್ಡು ಅಕ್ರಮದಲ್ಲಿ ಸಾಕಷ್ಟು ಸದ್ದು ಮಾಡಿದ್ದ ತಿರುಪತಿ ತಿಮ್ಮಪ್ಪನ ಸನ್ನಿಧಾನ ಈಗಷ್ಟೇ ಶಾಂತವಾಗ್ತಿದೆ. ಈ ಮಧ್ಯೆ ಸಿಲಿಕಾನ್ ಸಿಟಿ ತಿರುಮಲ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾಗಿದ್ದ ದಿವಂಗತ ಆದಿಕೇಶವಲು ಅಳಿಯ ಜಿವಿಎಸ್ ಎಸ್ಟೇಟ್ ಚೇರ್ಮನ್ ಶ್ರೀನಿವಾಸ ಮೂರ್ತಿ ಭೂದೇವಿ ಮತ್ತು ಶ್ರೀದೇವಿಗೆ ಗಂಡಭೇರುಂಡ ವಜ್ರಮಾಲೆ ಮತ್ತು ವೈಜಯಂತಿ ಮಾಲೆ ಕೊಡುಗೆ ನೀಡಿದ್ದಾರೆ.

ಇಂದು ಮುಂಜಾನೆ ಕೆ.ಎಂ. ಶ್ರೀನಿವಾಸಮೂರ್ತಿ ಅವರ ಕುಟುಂಬ ತಿಮ್ಮಪ್ಪನ ಸನ್ನಿಧಿಗೆ ಅಪರೂಪದ ನೀಲಿ ನವರತ್ನಗಳೊಂದಿಗೆ ವಿಶಿಷ್ಟವಾಗಿ ವಿನ್ಯಾಸಗೊಳಿಸಿರೋ ಗಂಡಭೇರುಂಡ ವಜ್ರಮಾಲೆ ಹಾಗೂ ವೈಜಯಂತಿ ಮಾಲೆಯನ್ನು ದೇವಸ್ಥಾನಕ್ಕೆ ಕೊಡುಗೆ ನೀಡಿದ್ದಾರೆ. ಈ ಆಭರಣಗಳ ಮೌಲ್ಯ ಅಂದಾಜು 1.26 ಕೋಟಿ ಎಂದು ಹೇಳಲಾಗ್ತಿದೆ‌.

ಶ್ರೀನಿವಾಸ್ ಕುಟುಂಬಕ್ಕೂ ತಿಮ್ಮಪ್ಪ ಸನ್ನಿಧಿಗೂ ಸಾಕಷ್ಟು ಒಡನಾಟವಿದ್ದು, ತಿಮ್ಮಪ್ಪ ಉದ್ಯಮಿ ಶ್ರೀನಿವಾಸ್ ಅವರ ಮನೆ ದೇವರು ಕೂಡ. ಇಂದು ತಮ್ಮ ತುಂಬು ಕುಟುಂಬದೊಂದಿಗೆ ದೇವಸ್ಥಾನಕ್ಕೆ ತೆರಳಿ ಈ ಸೇವೆ ಸಲ್ಲಿಸಿದ್ದಾರೆ. ತಿಮ್ಮಪ್ಪನ ಸನ್ನಿಧಿಗೆ ಆಭರಣಗಳನ್ನು ಕೊಡುಗೆ ನೀಡಿರೋ ದೃಶ್ಯ ಪಬ್ಲಿಕ್ ನೆಕ್ಸ್ಟ್ ಗೆ ಎಕ್ಸ್ ಕ್ಲೂಸಿವ್ ಆಗಿ ಲಭಿಸಿದೆ.

Edited By : Ashok M
PublicNext

PublicNext

14/11/2024 10:03 pm

Cinque Terre

28.63 K

Cinque Terre

2