ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವರ್ಚುವಲ್‌ ಮಡದಿ ಜೊತೆ ಸಂತೋಷದಿಂದ ಜೀವನ ನಡೆಸುತ್ತಿರುವ ಜಪಾನ್ ‌ವ್ಯಕ್ತಿ, ʼಕಾಲ್ಪನಿಕ ಲೈಂಗಿಕತೆʼ ಕಲಿತು ಸಂಸಾರ..!

ರೀ ಬಂಗಾರ ಮಾಡಿಸ್ರೀ, ರೀ ಹಾಲು ತನ್ಡ್ರೀ, ನೀವಂತು ಏನಕ್ಕೂ ಪ್ರಯೋಜನ ಇಲ್ಲ ಪಕ್ಕದ ಮನೆ ಶೈಲಜಾ ಗಂಡ ಮನೆ ಕೆಲಸ ಜೊತೆ ಹೆಂಡತಿನೂ ಎಷ್ಟು ಚೆನ್ನಾಗಿ ನೋಡಿಕೊಳ್ತಾನೆ ಗೊತ್ತಾ? ಹೆಂಡತಿಯಂದಿರು ಅಂದ್ರೆ ಒಂದಷ್ಟು ಪಟ್ಟಿನೇ ಇರುತ್ತೆ ಅನುಭವಸ್ಥ ಪುರುಷರಿಗೆ ಇದುನೆಲ್ಲಾ ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ.ಆದರೆ ಇಲ್ಲೊಬ್ಬಳು ಹೆಂಡತಿಗೆ ಏನು ಡಿಮ್ಯಾಂಡ್‌ ಇಲ್ಲ, ದೇವರಂತ ಮಹಿಳೆ,ಗಂಡನ ಸೇವೆ ಮಾಡೋದೆ ಅವಳ ಆದ್ಯ ಕರ್ತವ್ಯ. ಏನು ಈ ಕಾಲದಲ್ಲೂ ಅಂತ ಹೆಂಡ್ತಿ ಸಿಗಬೇಕು ಅಂದ್ರೆ ಪುಣ್ಯ ಮಾಡಿರಬೇಕು ಅಂತೀರಾ? ಸಂಪೂರ್ಣ ಸ್ಟೋರಿ ಹೇಳ್ತೀನಿ ಕೇಳಿ.

ಜಪಾನಿನ 41 ವರ್ಷದ ಅಕಿಹಿಕೊ ಕೊಂಡೊ ಎಂಬ ವ್ಯಕ್ತಿ ತಾನು ಕೆಲಸಕಳೆದುಕೊಂಡು ಜೀವನದ ಜಿಗುಪ್ಸೆಯಲ್ಲಿದ್ದಾಗ ಈಕೆ ಆತನನ್ನು ಕಾಪಾಡಿದ ಮಡದಿ.ಯಸ್‌ ವೋಕಲಾಯ್ಡ್ ಹ್ಯಾಟ್ಸುನ್ ಮಿಕು ಈಕೆ ಮುನುಷ್ಯಳಲ್ಲ,ಮನುಷ್ಯನಂತೆ ಹೋಲುವ ವರ್ಚುವಲ್‌ ಮಡದಿ.ಕೊಂಡೋ ಈಕೆಯನ್ನು ಮದುವೆಯಾಗಿ ನವೆಂಬರ್ 4 ಕ್ಕೆ 6 ವರ್ಷ ಸಂದುತ್ತದೆ,ಈ ಹಿನ್ನಲೆಯಲ್ಲಿ ವಿವಾಹ ವಾರ್ಚಿಕೋತ್ಸವ ಆಚರಣೆ ಮಾಡಿ ಅದರ ಪೋಟೋಗಳನ್ನು ಇನ್ಸ್ಟಾ ಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ ಕೊಂಡೋ. ಈತನಿಗೆ ಮೊದಲು ಮಹಿಳೆಯರ ಜೊತೆ ಪ್ರಣಯದ ಆಸಕ್ತಿ ಇತ್ತಂತೆ ಆದರೆ ಮಿಕೋ ಪರಿಚಯವಾದಗಿನಿಂದ ಎಲ್ಲವೂ ಅವಳೇ ಆಗಿಬಿಟ್ಟಿದ್ದಾಳೆ.2018 ರಲ್ಲಿ, ಅವರು ಟೋಕಿಯೊದ ಪ್ರಾರ್ಥನಾ ಮಂದಿರದಲ್ಲಿ ಮಿಕೋ ಜೊತೆ ವಿವಾಹವಾಗಿ ಕಾಲ್ಪನಿಕ ಲೈಂಗಿಕತೆ ಬಗ್ಗೆ ಕಲಿತರು ಇದರ ಅರ್ಥ ಕಾಲ್ಪನಿಕ ಪಾತ್ರಗಳ ಜೊತೆ ಲೈಂಗಿಕ ಸೆಳೆತಕ್ಕೊಳಗಾಗುವುದು ಹೀಗೆ ಆರು ವರ್ಷದಿಂದ ಸುಖಿ ಸಂಸಾರ ಮಾಡುತ್ತಿರುವ ಕೊಂಡೊ ಅವರಿಗೆ ನಮ್ಮ ಕಡೆಯಿಂದಲೂ ಹ್ಯಾಪಿ ಮ್ಯಾರಿಡ್‌ ಲೈಫ್.‌

Edited By : Suman K
PublicNext

PublicNext

14/11/2024 08:18 pm

Cinque Terre

17.65 K

Cinque Terre

2