ರಷ್ಯಾದಲ್ಲಿ ದಿನ ಹೋದಂತೆ ಜನಸಂಖ್ಯೆ ಇಳಿಮುಖವಾಗುತ್ತಿದ್ದು, ಮಕ್ಕಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ "ಸೆಕ್ಸ್ ಸಚಿವಾಲಯ" ಸ್ಥಾಪಿಸಲು ರಷ್ಯಾ ಮುಂದಾಗಿದೆ.2022 ಫೆಬ್ರವರಿಯಿಂದ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು ಅಪಾರ ಜೀವ ಹಾನಿ ಸಂಭವಿಸಿ, ಜನಸಂಖ್ಯೆ ಇಳಿಮುಖವಾಗಿದೆ.
ರಷ್ಯಾದಲ್ಲಿ ಜನಸಂಖ್ಯೆ ಹೆಚ್ಚಿಸಲು ಹಲವಾರು ಪ್ಲ್ಯಾನ್ ಮಾಡಿದ ಅಲ್ಲಿನ ಸರಕಾರ ಅವುಗಳು ಹೀಗಿವೆ.
೧. 10 PM ಮತ್ತು 2 AM ತನಕ ಇಂಟರ್ ನೆಟ್ ಹಾಗೂ ಲೈಟ್ ( ಪವರ್ ಕಟ್) ಮಾಡುವುದು ಆ ಮೂಲಕ ದಂಪತಿಗಳು ಲೈಂಗಿಕ ಕ್ರೀಯೆ ನಡೆಸುವಂತೆ ಉತ್ತೇಜಿಸುವುದು
೨. ಮಕ್ಕಳನ್ನು ಹಡೆದು ಮನೆಯಲ್ಲಿಯೇ ಇದ್ದು ಮನೆಗೆಲಸ ಮಕ್ಕಳು ನೋಡಿಕೊಂಡು ಇರುವ ಮಹಿಳೆಯರಿಗೆ ಮಾಸಿಕ ಪಿಂಚಣಿ ನೀಡುವುದು
೩.ರಷ್ಯಾದ ಜನರು ಡೇಟಿಂಗ್ ಹೋಗಲು ಸರಕಾರನೇ ಹಣ ಕೊಡುವುದು 5,000 ರೂಬಲ್ಸ್ ಅಂದರೆ ಭಾರತದ ಕರೆನ್ಸಿ ಪ್ರಕಾರ ₹4,395 ಪ್ರತಿ ಜೋಡಿಗೆ ನೀಡುವುದು
೪.ದಂಪತಿಯ ಫಸ್ಟ್ ನೈಟ್ ಗೂ ಹಣ ನೀಡುವುದು ಹಾಗೂ ಗರ್ಭಧಾರಣೆಯನ್ನು ಉತ್ತೇಜಿಸುವ ಹಿನ್ನಲೆಯಲ್ಲಿ ₹23,122 ರೂ ಹಣ ನೀಡುವುದು
೫.ಸಂತಾನೋತ್ಪತ್ತಿ" ಯಲ್ಲಿ ತೊಡಗಿಸಿಕೊಳ್ಳಲು ರಷ್ಯನ್ನರು ಕಚೇರಿಗಳು ಮತ್ತು ಕಾರ್ಖಾನೆಗಳಲ್ಲಿ ಕಾಫಿ ಮತ್ತು ಊಟದ ವಿರಾಮಗಳನ್ನು ಬಳಸಬಹುದು.
PublicNext
13/11/2024 08:10 pm