ಭಾರತದ ಶ್ರೀಮಂತ ನಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಗೆಸ್ ಮಾಡಿ ಯಾರಿರಬಹುದು? ಪ್ರಿಯಾಂಕ, ದೀಪಿಕಾ,ಆಲಿಯಾ,ನಯನತಾರ..ಹೂ...ಹೂ..ಅಲ್ಲ.ಜೂಹಿ ಚಾವ್ಲಾ.2024 ರಲ್ಲಿ ತನ್ನ ನಿವ್ವಳ ಮೌಲ್ಯ ರೂ 4,600 ಕೋಟಿ ಎಂದು ಇವರು ಬಹಿರಂಗ ಪಡಿಸಿದಾಗ ಹೆಡ್ ಲೈನ್ ಸ್ಟೋರಿಯಾಗಿದ್ದರು.1980 ಮತ್ತು 1990 ರ ದಶಕದಲ್ಲಿ ಸಿನಿಮಾ ಮಾಡಿ ಹೆಸರು ಮಾಡಿದ್ದ ಜೂಹಿ 2000 ನಂತರ ಸಿನಿಮಾಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದರು.ಆದರೂ ಈಕೆ ಇಷ್ಟೊಂದು ರಿಚ್ ಹೇಗೆ ಅನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ.
ಜೂಹಿ ಐಪಿಎಲ್ ತಂಡದ ಸಹ ಮಾಲೀಕರಾಗಿದ್ದಾರೆ ಹಾಗೂ ರೆಡ್ ಚಿಲ್ಲೀಸ್ ಗ್ರೂಪ್ನ ಸಹ ಸಂಸ್ಥಾಪಕರು ಹೌದು.ಬಾಲಿವುಡ್ ನ ಸಂದರ್ಶನವೊಂದರಲ್ಲಿ ಜೂಹಿ ಹೇಳಿರುವ ಪ್ರಕಾರ, ಆರನೇ ತರಗತಿಯಲ್ಲಿ ದೊಡ್ಡವಳಾದ ಮೇಲೆ ಏನು ಆಗ್ತೀಯಾ ಎಂದು ಕೇಳಿದ್ದಕ್ಕೆ ಪುಸ್ತಕದಲ್ಲಿ ಪ್ರಸಿದ್ಧ ಹಾಗೂ ಶ್ರೀಮಂತ ವ್ಯಕ್ತಿಯಾಗುತ್ತೇನೆಂದು ಬರೆದಿದ್ದರಂತೆ.ಕಾಲೇಜಿನ ಸಣ್ಣ ಫ್ಯಾಷನ್ ಶೋ ಕಾರ್ಯಕ್ರಮ ಮಿಸ್ ಇಂಡಿಯಾ ವರೆಗೂ ಕರೆದುಕೊಂಡು ಹೋಗಿ ಅಲ್ಲಿಂದ ಮಾಡೆಲಿಂಗ್ ಸಿನಿಮಾ ಜರ್ನಿ ಆರಂಭಿಸಿದೆ ಎಂದಿದ್ದಾರೆ ನಟಿ.
PublicNext
13/11/2024 07:48 pm