ವಿಲನ್ ಇಲ್ಲ, ಫೈಟಿಂಗ್ ಇಲ್ಲ,ಹೀರೋಯಿಸಂ ಇಲ್ಲ, ಹೀರೋಯಿನ್ ಇಲ್ಲ,ಥ್ರಿಲ್ ಇಲ್ಲ ಆದರೂ ಓಟಿಟಿಯಲ್ಲಿ ಎಲ್ಲರ ಮನಸ್ಸು ಗೆಲ್ಲುತ್ತಿದೆ ಮೈಯಳಗನ್,ಬಾಲ್ಯದ ನೆನಪಿನ ಬುತ್ತಿಯನ್ನು ಮತ್ತೇ ತೆರೆದು ಸಣ್ಣ ಸಣ್ಣ ನೆನಪಿನಂಗಳದ ಪುಟವನ್ನು ಮತ್ತೇ ತಿರುವಿ ಹಾಕಿ ಸಣ್ಣದಾಗಿ ಕಚಗುಳಿ ಇಡುವ ಸಿನಿಮಾ ಇದು.ಸೆಪ್ಟೆಂಬರ್ 27, 2024 ಭಾವನಾತ್ಮಕ ಕಥಾ ಹಂದರ ಹೊಂದಿರುವ ಈ ಸಿನಿಮಾವು ಥಿಯೇಟರ್‌ಗಳಲ್ಲಿ 25 ದಿನಗಳ ಯಶಸ್ವಿ ಪ್ರದರ್ಶನದ ನಂತರ OTT ನೆಟ್‌ಫ್ಲಿಕ್ಸ್ ಯಲ್ಲಿ ಬಿಡುಗಡೆಗೊಂಡಿದೆ. ಪ್ರೇಮ್ ಕುಮಾರ್ ನಿರ್ದೇಶನದ ಅರವಿಂದ್ ಸ್ವಾಮಿ ಮತ್ತು ಕಾರ್ತಿ ಅಭಿನಯದ ಮೂಲಕ ಮನಸ್ಸಲ್ಲಿ ಅಚ್ಚಾಗಿ ಉಳಿಯುವಂತಿದೆ ಈ ಸಿನಿಮಾ.
ಈ ಚಿತ್ರವು 8.4/10 ರ IMDb ರೇಟಿಂಗ್‌ನೊಂದಿಗೆ ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡಿದೆ.ಇದು ಪ್ರಸ್ತುತ ಭಾರತದ ಟಾಪ್ 10 ರಲ್ಲಿ ಎರಡನೇ ಸ್ಥಾನದಲ್ಲಿದೆ. 1996 ರಲ್ಲಿ ಅರುಲ್ (ಅರವಿಂದ್ ಸ್ವಾಮಿ) ಮತ್ತು ಅವನ ಕುಟುಂಬವು ಆಸ್ತಿ ವಿವಾದದಿಂದಾಗಿ ತಮ್ಮ ಮನೆಯನ್ನು ಮಾರಾಟ ಮಾಡಿ ಚೆನ್ನೈ ಹೋಗಿ ಸೆಟಲ್ ಆಗ್ತಾರೆ.2018 ರಲ್ಲಿ, ಅರುಲ್ ತನ್ನ ಸೋದರಸಂಬಂಧಿಯ ಮದುವೆಗಾಗಿ ತನ್ನ ಊರಿಗೆ ಹಿಂದಿರುಗಿದಾಗ ಹಳೆಯ ಸ್ನೇಹಿತನನ್ನು ಭೇಟಿಯಾಗಿ ನಂತರ ಆಗುವ ಒಂದೊಂದು ಘಟನೆಯನ್ನು ರಸವತ್ತಾಗಿ ತೋರಿಸಿದ್ದಾರೆ ನಿರ್ದೇಶಕರು.35 ಕೋಟಿ ಬಜೆಟ್ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 52 ಕೋಟಿಗಳಿಸಿದೆ.
PublicNext
12/11/2024 08:10 pm