ಪುಟ್ಟ ಗೌರಿ ಮದುವೆ, ನಾಗಿಣಿ, ಬಿಗ್ ಬಾಸ್ ಮೂಲಕ ಕನ್ನಡಿಗರ ಮನ,ಮನೆಯಲ್ಲಿ ಹೆಸರುವಾಸಿಯಾದ ನಮ್ರಾತಾ ಇತ್ತೀಚೆಗೆ ಇಂಡಸ್ಟ್ರಿಯಲ್ಲಿ ತನಗಾದ ಕೆಟ್ಟ ಅನುಭವದ ಬಗ್ಗೆ ಬಿಚ್ಚಿಟ್ಟಿದ್ದಾರೆ.ಕಮಿಂಟ್ ಮೆಂಟ್ ಅನ್ನುವ ಹೆಸರಿನಲ್ಲಿ ನನ್ನ ಹೆಸರು ಓಡಾಡುತ್ತಿತ್ತು ಎಂಬ ಕೆಟ್ಟ ಅನುಭವ ನೆನಪು ಮಾಡಿಕೊಂಡ ಈಕೆ ಇಂಡಸ್ಟ್ರಿಯ ಕರಾಳ ಮುಖ ಬಿಚ್ಚಿಟ್ಟಿದ್ದಾರೆ.
ಬೇರೆ ಬೇರೆ ನಟಿಯರ ಹೆಸರು ಬಳಸಿಕೊಂಡು ನಮ್ಮನ್ನು ಅದೇ ಜಾಲದಲ್ಲಿ ಸಿಲುಕಿ ಹಾಕಿಸಲು ಪ್ರಯತ್ನಿಸುವ ಕೆಟ್ಟ ಚಟವೊಂದು ಇಂಡಸ್ಟ್ರಿಯಲ್ಲಿ ಇದೆಯಂತೆ.ಬಾಲ್ಯದಿಂದಲೂ ಅಪ್ಪ ಅಮ್ಮ ನ ಜೊತೆಗೆ ಶೂಟಿಂಗ್ ಹೋಗುತ್ತಿದ್ದ ನಮ್ರತಾ ಯಾವತ್ತೂ ಈ ರೀತಿ ಕೆಟ್ಟ ಅನುಭವವಾಗಿರಲಿಲ್ಲ ಎಂದಿದ್ದಾರೆ.
ಒಂದು ದಿನ ನಮ್ರತಾ ಗೆ ಕಾಸ್ಟಿಂಗ್ ಡೈರೆಕ್ಟರ್ ಇಂದ ಕಾಲು ಬರುತ್ತೆ,ಒಂದು ಕಡೆ ಹೋಗ್ಬೇಕು ಹೋಗ್ತೀಯಾ ಅಂತಾ ಕೇಳ್ತಾರೆ,ನನಗೆ ಏನೆಂದು ಅರ್ಥ ಆಗದೆ ಎಲ್ಲಿಗೆ ಹೋಗ್ಬೇಕು ಎಂದು ಕೇಳಿದ ಅದಕ್ಕೆ ಅವರು ಅದೇ ಕಣಮ್ಮ ಕಮಿಂಟ್ ಮೆಂಟ್ ನಿನಗೆ ಗೊತ್ತಿಲ್ವಾ, ಕಮಿಂಟ್ ಮೆಂಟ್ ಗೆ ಶಾರ್ಟ್ ಫಾರ್ಮ್ ನಲ್ಲಿ ಈವೆಂಟ್ ಅಂತಾರೆ ಅಲ್ಲಿಗೆ ಹೋಗ್ತೀಯಾ ಎಂದು ಕೇಳಿದರು,ಏನು ಈವೆಂಟ್ ಅಂದಿದ್ದಕ್ಕೆ ನಿಮಗೆ ಗೊತ್ತಿಲ್ವಾ? ಅಂದ್ರು, ಕೋಪದಿಂದ ನಾನು ಕಾಲ್ ಕಟ್ ಮಾಡಿದೆ
ನಂತರ ನನ್ನ ಹಲವಾರು ಫೊಟೋಗಳನ್ನು ಬಳಸಿಕೊಂಡು ಪ್ರೊಪೈಲ್ ಕ್ರಿಯೇಟ್ ಮಾಡಿ ರೇಟ್ ಫಿಕ್ಸ್ ಮಾಡಿರುವ ಸ್ಕ್ರೀನ್ ಶಾಟ್ ಕಳುಹಿಸಿದ್ರು.ಅದನ್ನು ಕಸ್ಟಮರ್ಸ್ ಗೆ ಕಳುಹಿಸಿ ಅವರಿಂದ ಹಣ ವಸೂಲಿ ಮಾಡಿ ನಂತರ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ.ಹೀಗೆ ಕ್ರಿಯೇಟ್ ಮಾಡಿರುವ ಪ್ರೊಪೈಲ್ ಎಲ್ಲೆಡೆ ಹರಿದಾಡಲು ಆರಂಭವಾಗಿ ನಮ್ರತಾ ಹಾಗಂತೆ ಹೀಗಂತೆ ಎಂದು ರೂಮರ್ಸ್ ಆರಂಭವಾಗುತ್ತೆ.ಇದರಿಂದ ಎಚ್ಚೆತ್ತ ನಾನು ಪೋಷಕರ ಸಹಾಯದಿಂದ ಸಮಸ್ಯೆ ಬಗೆಹರಿಸಿದ್ದೇನೆ.ಕೆಲವು ಹೆಣ್ಣು ಮಕ್ಕಳು ಇದರ ಬಗ್ಗೆ ಮಾತನಾಡುತ್ತಾರೆ, ಇನ್ನೂ ಕೆಲವರು ಮರ್ಯಾದೆ ಹೆದರಿ ಸಹಿಸಿಕೊಳ್ಳುತ್ತಾರೆ ಎಂದಿದ್ದಾರೆ ನಮ್ರತಾ.
PublicNext
12/11/2024 07:41 pm